ಬೆಂಗಳೂರು; ಕಳೆದ ಕೆಲವು ವರ್ಷಗಳಿಂದಾನೂ ಡಿಜಿಟಲ್ ಪೇಮೆಂಟ್ ಅನ್ನೇ ಜನ ಅನುಸರಿಸುತ್ತಿದ್ದಾರೆ. ಸಣ್ಣಪುಟ್ಟ ವ್ಯವಹಾರಕ್ಕೂ ಜನರ ಬಳಿ ಕ್ಯಾಶ್ ಇರೋದಿಲ್ಲ. ಹತ್ತು ರೂಪಾಯಿ ಆದರೂ ಸರಿ ಅದು ಡಿಜಿಟಲ್ ಪೇಮೆಂಟ್ ಅನ್ನೇ ಮಾಡುತ್ತಾರೆ. ಆದರೆ ಇಂದು ದಿಢೀರನೇ ಡಿಜಿಟಲ್ ಪೇಮೆಂಟ್ ಕೈ ಕೊಟ್ಟರೆ ಹೇಗಾಗಬೇಡ ಅಲ್ವಾ..? ಇಂದಿನ ದಿನಗಳಲ್ಲಿ ಹತ್ತು ರೂಪಾಯಿಗೆ ಏನಾದರೂ ತೆಗೆದುಕೊಂಡರೂ ಕೂಡ ಫೋನ್ ಪೇ ಮಾಡ್ತೇವೆ. ಇಂದು ಫೋನ್ ಪೇ, ಗೂಗಲ್ ಪೇ ವರ್ಕ್ ಆಗದೆ ಜನ ಪರದಾಡಿದ್ದಾರೆ.
ಯುಪಿಐ ಸೇವೆಯಲ್ಲಿ ಸಾಕಷ್ಟು ವ್ಯತ್ಯಯವಾಗಿದ್ದರಿಂದ ಫೋನ್ ಪೇ, ಗೂಗಲ್ ಪೇ ಬಳಸುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾತ್ಕಾಲಿಕ ಅಡಚಣೆ ಉಂಟಾಗಿದೆ. ಬೆಳಗ್ಗೆ 11 ಗಂಟೆಯಿಂದಾನು ಈ ಸಮಸ್ಯೆ ಕಾಡಿದ್ದು, ಪೇಮೆಂಟ್ ಮಾಡಲು ಹೋದಾಗೆಲ್ಲಾ ಪ್ರೆಸೆಸಿಂಗ್ ಅಂತಾನೇ ಬಂದಿದೆ. ಯುಪಿಐ ಅಡಚಣೆ ಇದೇ ಮೊದಲೇನು ಅಲ್ಲ. ಈ ತಿಂಗಳಲ್ಲಿ ನಾಲ್ಕು ಬಾರಿ ಈ ರೀತಿ ಅಡಚಣೆಯಾಗಿದೆ.
ಯುಪಿಐ ಅಡಚಣೆಯಾದ ಪರಿಣಾಮ ಸೋಷಿಯಲ್ ಮೀಡಿಯಾದಲ್ಲಿ ಇದರ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ. ಒಬ್ಬಿಬ್ಬರಿಗಲ್ಲ ಯುಪಿಐ ಬಳಕೆ ಮಾಡುವ ಯಾರೊಬ್ಬರಿಗೂ ಪೇಮೆಂಟ್ ಮಾಡಲು ಸಾಧ್ಯವಾಗಿಲ್ಲ ಈ ಸಮಸ್ಯೆ ತಿಳಿಯುತ್ತಿದ್ದಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನಿಸಿದೆ. ಬಳಿಕ ಸಮಸ್ಯೆ ನಿವಾರಣೆ ಆಗಿದೆ ಎನ್ನಲಾಗಿದೆ. ಆದರೂ ಕೆಲವೊಂದಿಷ್ಟು ಮಂದಿಗೆ ಅದೇ ಸಮಸ್ಯೆ ತಲೆದೂರಿತ್ತು. ಇತ್ತೀಚಿನ ದಿನಗಳಲ್ಲಿ ಎಲ್ಲರು ಡಿಜಿಟಲ್ ಪೇಮೆಂಟ್ ಅನ್ನೇ ನಂಬಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಡಿಜಿಟಲ್ ಪೇಮೆಂಟ್ ಸಮಸ್ಯೆಯಾದರೆ ಕಷ್ಟ.














