ತಿರುಪತಿ ಬೆಟ್ಟ ಹತ್ತಲು ಜನರಲ್ಲಿ ಆತಂಕ : ಈಗ ಚಿರತೆ ಜೊತೆಗೆ ಕರಡಿಯೂ ಪ್ರತ್ಯಕ್ಷ..!

suddionenews
1 Min Read

 

ಇತ್ತಿಚೆಗಷ್ಟೇ ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತುವುದಕ್ಕೆ ಹೋದಾಗ ಬಾಲಕಿಯನ್ನ ಚಿರತೆಯೊಂದು ಕೊಂದ ಘಟನೆ ನಡೆದಿದೆ. ಅದಾದ ಬಳಿಕ ಆ ಚಿರತೆಯನ್ನ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಇನ್ಮುಂದೆ ಚಿರತೆ ಕಾಟ ಇರಲ್ಲ ಅಂತ ನೆಮ್ಮದಿಯಿಂದ ಮತ್ತೆ ಬೆಟ್ಟ ಹತ್ತೋಕೆ ಹೋದ ಭಕ್ತರಿಗೆ ಚಿರತೆ ಜೊತೆಗೆ ಕರಡಿಯೂ ಕಾಟ ಕೊಟ್ಟಿದೆ.

ಭಕ್ತರು ಗುಂಪು ಗುಂಪಾಗಿ ಪಾದಚಾರಿ ಮಾರ್ಗದಲ್ಲಿ ಬೆಟ್ಟ ಹತ್ತಲು ಹೋಗಿದ್ದಾರೆ. ಆಗ ಲಕ್ಷ್ಮೀ ನರಸಿಂಹ ದೇವಾಲಯದ ಬಳಿ ಮರಗಳ ನಡುವೆ ಚಿರತೆ ಕಾಣಿಸಿಕೊಂಡಿದೆಯಂತೆ. ಚಿರತೆ ಕಂಡು ಭಯಗೊಂಡು ಓಡಿದ ಭಕ್ತರಿಗೆ ಸ್ವಲ್ಪ ಸಮಯದಲ್ಲಿಯೇ ಕರಡಿಯೂ ಕಾಣಿಸಿಕೊಂಡು ಆತಂಕದಲ್ಲಿ ಓಡಿದ್ದಾರೆ.

ಭಯಗೊಂಡ ಭಕ್ತರು ನೇರವಾಗಿ ಟಿಟಿಡಿ ಆಡಳಿತ ಮಂಡಳೊಗೆ ವಿಷಯ ತಿಳಿಸಿದ್ದಾರೆ. ಸದ್ಯ ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತುಕೊಂಡು, ಚಿರತೆ ಮತ್ತು ಕರಡಿ ಕಂಡ ಸ್ಥಳಕ್ಕೆ ಹೋಗಿ ಹುಡುಕಾಟ ನಡೆಸುತ್ತಿದೆ. ಆದ್ರೆ ಈ ಘಟನೆಗಳಿಂದ ಭಕ್ತರು ಭಯಭೀತರಾಗಿದ್ದಾರೆ. ಮತ್ತೆ ಪಾದಚಾರಿ‌ ಮಾರ್ಗದಲ್ಲಿ ಸಂಚಾರ ಮಾಡುವುದು ಕಷ್ಡ ಸಾಧ್ಯವಾಗಿದೆ. ಯಾಕಂದ್ರೆ ಇತ್ತಿಚೆಗಷ್ಟೇ ಒಂದು ಚಿರತೆಯನ್ನು ಸೆರೆ ಹಿಡಿಯಲಾಗಿದೆ. ಈಗ ಮತ್ತೊಂದು ಚುರತೆ ಕಾಣಿಸಿಕೊಂಡಿರುವುದು, ಇನ್ನು ಅದೆಷ್ಟು ಚಿರತೆಗಳು ಇದ್ದಾವೊ ಎಂಬ ಭಯ ಉಂಟು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *