ಚಿತ್ರದುರ್ಗ, (ಅ.20) : ಸಂವಿಧಾನ ಬದ್ದ ಹಕ್ಕು ಹಳೆಯ ಪಿಂಚಣಿ ನೀಡುವುದು ಸರ್ಕಾರದ ಕೆಲಸ. ನಮ್ಮ ಹೋರಾಟ ಯಾರ ವಿರುದ್ದವು ಅಲ್ಲ. ನಮ್ಮ ಬಹು ಬೇಡಿಕೆ ಹಳೆಯ ಪಿಂಚಣಿ ಪಡೆಯುವುದು ಎಂದು ಕ.ರಾ.ಸ. NPS.ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್ ಹೇಳಿದರು.
ಚಿತ್ರದುರ್ಗ ನಗರ ಒನಕೆ ಓಬವ್ವ ವೃತ್ತಕ್ಕೆ ಪಾದಯಾತ್ರೆ ಮುಖಾಂತರ ಆಗಮಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸುಪ್ರೀಂಕೋರ್ಟ್ ಆದೇಶದಂತೆ ನಮಗೆ ಪಿಂಚಣಿ ನೀಡಬೇಕು. ಇಲ್ಲವಾದರೆ ಡಿಸೆಂಬರ್ ತಿಂಗಳಲ್ಲಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಕರೆ ಕೊಡಲಾಗುವುದು ಎಂದು ಅವರು ಹೇಳಿದರು.
NPS ನೌಕರರು ಹಾಗೂ ಕುಟುಂಬದ ಸದಸ್ಯರು ಈ ಹೋರಾಟದಲ್ಲಿ ಭಾಗವಹಿಸುತ್ತಾರೆ. ರಾಜ್ಯ ಉಪಾಧ್ಯಕ್ಷ, ಸಿದ್ದಪ್ಪಸಂಗಣ್ಣ ನವರು ಮಾತನಾಡಿ, ರಾಜ್ಯದ ಸುಮಾರು ಮೃತ NPS ನೌಕರರ ಸ್ಥಿತಿ ಇಂದು ಹೇಳ ತೀರದು. ಆನೇಕ ಕುಟುಂಬಗಳಿಗೆ ಇಂದು ಪಿಂಚಣಿ ಸಿಕ್ಕಿಲ್ಲ ಎಂದರು. ಪ್ರಧಾನ ಕಾರ್ಯದರ್ಶಿ ನಾಗನಗೌಡ ಮಾತನಾಡಿ, ರಾಜ್ಯದ ಎಲ್ಲಾ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಡಿಸೆಂಬರ್ ,19 ಹೋರಾಟ ಐತಿಹಾಸಿಕ ದಿನಕ್ಕೆ ಪಾತ್ರವಾಗಲಿದೆ. ಜೊತೆಗೆ NPS ರದ್ದುಪಡಿಸಿ, ಹಳೆಯ ಪಿಂಚಣಿ ಜಾರಿಗೊಳಿಸಿದರೆ ಮಾತ್ರ ಹೋರಾಟ ಹಿಂಪಡೆಯುವುದು ಎಂದರು.
ಈ ಸಂದರ್ಭದಲ್ಲಿ ಡಾ.ಎಸ್.ಆರ್. ಲೇಪಾಕ್ಷ, ಜಿಲ್ಲಾಧ್ಯಕ್ಷರು, ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ, ಕಲ್ಲೇಶ್ ಮೌರ್ಯ, ಶಿವಣ್ಣ, ಮಮತ,ಆಶಾ,ಪ್ರದೀಪ್ ಕುಮಾರ್,NGO ಪ್ರಧಾನ ಕಾರ್ಯದರ್ಶಿ, ಮಾರುತೇಶ್,ಜಿಲ್ಲಾಧ್ಯಕ್ಷರು, ಪ್ರಾ.ಶಿ.ಸಂಘ.ಪಾತಣ್ಣ,ಜಿಲ್ಲಾಧ್ಯಕ್ಷರು,PDO ಸಂಘ,ಬಸವರಾಜ್, ಕೋಮಲ್,ರವಿ,ಬೆಸ್ಕಾಂ ಇಲಾಖೆ ಹಾಗೂ ಬಾಗೇಶ್, ಆರೋಗ್ಯ ಇಲಾಖೆ ಜಿಲ್ಲೆಯ ಎಲ್ಲಾ ಇಲಾಖೆಯ ಸಾವಿರಾರು ನೌಕರರು ಭಾಗವಹಿಸಿದ್ದರು.