ವಿಜಯಪುರ: ಕೊರೊನಾ ಕೇಸ್ ಎಲ್ಲೆಡೆ ಹೆಚ್ಚಳವಾಗುತ್ತಿದೆ. ಅದರ ಜೊತೆಗೆ ಒಮಿಕ್ರಾನ್ ಭೀತಿ ಕೂಡ ಕಾಡ್ತಾ ಇದೆ. ಇದೀಗ ಸರ್ಕಾರದಿಂದ ಲಾಕ್ಡೌನ್ ಮಾಡುವ ಸಾಧ್ಯತೆಯೂ ಹೆಚ್ಚಾಗಿ ಕಾಣುತ್ತಿದೆ. ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂಬುದು ಸರ್ಕಾರವೇ ಮಾಡಿದ ರೂಲ್ಸ್. ಆದ್ರೆ ಈ ರೂಲ್ಸ್ ಅನ್ನ ಸಾಕಷ್ಟು ಬಾರಿ ಜನಪ್ರತಿನಿಧಿಗಳೇ ಬ್ರೇಕ್ ಮಾಡಿದ್ದಾರೆ.
ಈ ಬಗ್ಗೆ ಶಾಸಕ ಯತ್ನಾಳ್ ಜನಪ್ರತಿನಿಧಿಗಳ ಮೇಲೆ ಗರಂ ಆಗಿದ್ದಾರೆ. ಮಾಸ್ಕ್, ಸಾಮಾಜಿಕ ಅಂತರ ಕಾಪಾಡದವರು ಯಾರೇ ಆದರೂ ದಂಡ ಹಾಕಲೇ ಬೇಕು. ಮೊದಲು ಎಂಪಿ, ಎಂಎಲ್ಎಗಳಿಗೆ ದಂಡ ಹಾಕಿ. ಆಗ ಜನರಿಗೂ ಭಯ ಬರುತ್ತೆ. ಎಂಎಲ್ಎ ಗಳು ಬೇಕಾ ಬಿಟ್ಟಿ ಮದುವೆ ಮಾಡುತ್ತಾರೆ. ಆಗ ಜನರಿಗೆ ಏನು ಅರ್ಥವಾಗುತ್ತೆ ಹೇಳಿ. ಇವರೆಲ್ಲಾ ಅಲ್ಲಿ ಕೂತು ಕಥೆ ಹೇಳುತ್ತಾರೆ ಎನ್ನಿಸುತ್ತದೆ.
ಹೀಗಾಗಿ ಪೊಲೀಸರು ಮೊದಲು ಎಂಎಲ್ಎ ಗಳಿಗೆ ದಂಡ ಹಾಕಿ ಎಂದಿದ್ದಾರೆ. ಇದೆ ವೇಳೆ ಸಚಿವ ಸಂಪುಟದ ಬಗ್ಗೆ ಮಾತನಾಡಿದ್ದು, ಸಚಿವ ಸ್ಥಾನಕ್ಕಾಗಿ ಯಾರನ್ನು ಭೇಟಿಯಾಗುವ ಅವಶ್ಯಕತೆ ಇಲ್ಲ. ಪ್ರಧಾನಿಗಳು, ರಾಷ್ಟ್ರೀಯ ಅಧ್ಯಕ್ಷರ ಬಳಿ ಎಲ್ಲಾ ದಾಖಲಾತಿ ಇದೆ. ಈ ಬಾರಿ ವಿಜಯಪುರ ಜಿಲ್ಲೆಗೆ ಪ್ರಾಶಸ್ತ್ಯ ಸಿಗುವ ಸ್ಥಾನಮಾನ ಸಿಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.