ಬ್ರೆಜಿಲ್ ಫುಟ್ಬಾಲ್ ದಂತಕಥೆ ಪೀಲೆ (82) ವಿಧಿವಶರಾಗಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಭಾರತೀಯ ಕಾಲಮಾನ ಗುರುವಾರ ಮಧ್ಯರಾತ್ರಿಯ ನಂತರ ಕೊನೆಯುಸಿರೆಳೆದಿದ್ದಾರೆ.

ಪೀಲೆ ಬ್ರೆಜಿಲ್ ತಂಡವನ್ನು ಮೂರು ವಿಶ್ವಕಪ್‌ಗಳಲ್ಲಿ ಮುನ್ನಡೆಸಿದರು. ಅವರ ವೃತ್ತಿಜೀವನದಲ್ಲಿ 1,281 ಗೋಲುಗಳನ್ನು ಗಳಿಸಿದ್ದಾರೆ.


