PayCM ಅಸ್ತ್ರಕ್ಕೆ ಸಿದ್ದು ಉಗ್ರಭಾಗ್ಯದ ತಿರುಗೇಟು ನೀಡಿದ ಬಿಜೆಪಿ..!

1 Min Read

 

ಬೆಂಗಳೂರು: ಕಾಂಗ್ರೆಸ್ ಪಕ್ಷದ ನಾಯಕರು 40% ಭ್ರಷ್ಟಾಚಾರದ ಆರೋಪದ ವಿಚಾರವನ್ನಿಟ್ಟುಕೊಂಡು PayCM ಅಭಿಯಾನವನ್ನು ಶುರು ಮಾಡಿದ್ದರು. ಅದು ದೊಡ್ಡಮಟ್ಟದಲ್ಲಿಯೇ ಸದ್ದು ಮಾಡಿತ್ತು. ಬಿಜೆಪಿ ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡಿತ್ತು. ಇದೀಗ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ತಿರುಗೇಟು ನೀಡಿದೆ. ಸಾಲು ಸಾಲು ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದೆ.

ತುಕಡೆ ತುಕಡೆ ಗ್ಯಾಂಗಿನ ನಾಯಕರಾಗಿರುವ @RahulGandhi ಹಾಗೂ ಜಿಹಾದಿ ಬೆಂಬಲಿಗ ಸಿದ್ದರಾಮಯ್ಯ ಅವರ ಪ್ರೀತಿ ಹಾಲು ಜೇನಿನಂತೆ. ಜಿಹಾದಿಗಳ ಜೊತೆ ಕಾಂಗ್ರೆಸ್‌ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ.

ಪಿಎಫ್‌ಐ ನಿಷೇಧಿಸಿದ ಬಳಿಕ ದುಃಖಿತರಾದ ಸಿದ್ದರಾಮಯ್ಯ ಅವರು ಶನಿವಾರದಂದು ರಾಹುಲ್ ಗಾಂಧಿ ಮತ್ತು ಡಿಕೆ ಶಿವಕುಮಾರ್ ಅವರ ಜೊತೆ ಹೆಜ್ಜೆ ಹಾಕಲು ಬರಲೇ ಇಲ್ಲ. ಸಿದ್ದರಾಮಯ್ಯ ಅವರೇ, ಅಷ್ಟೊಂದು ದುಃಖವಾಗಿತ್ತೇ?.

ಜಿಹಾದಿಗಳ ಜೊತೆ ಕಾಂಗ್ರೆಸ್‌ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ. ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ಆರೋಪಿ, ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಕರ್ನಾಟಕಕ್ಕೆ ಸ್ವಾಗತ. ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಸೋನಿಯಾ ಆಗಮನದಿಂದ ಜೈಲುಹಕ್ಕಿಡಿಕೆಶಿ ಹಾಗೂ ಭ್ರಷ್ಟರಾಮಯ್ಯ ಅವರಿಗೆ ಶಕ್ತಿ ಬಂದಿದ್ದು ಸುಳ್ಳಲ್ಲ. ಭ್ರಷ್ಟರೆಲ್ಲ ಒಂದೆಡೆ ಸೇರುವಾಗ ಹುರುಪು, ಶಕ್ತಿ ಸಹಜವಾದದ್ದೇ!

ಇತ್ತ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರು PFI ಜಿಹಾದಿಗಳನ್ನು ಸಂಬಂಧಿಗಳಂತೆ ಸಾಕುತ್ತಿದ್ದರೆ, ಅತ್ತ ಕಾಂಗ್ರೆಸ್ ಪಕ್ಷ ಕಾಶ್ಮೀರದ ಕಣಿವೆಯಲ್ಲಿ ಉಗ್ರರನ್ನು ಬೆಂಬಲಿಸುತ್ತಿತ್ತು. ಜಿಹಾದಿಗಳ ಜೊತೆ ಕಾಂಗ್ರೆಸ್‌ ಹೊಂದಿರುವ ನಂಟಿನ ಬಗ್ಗೆ ತಿಳಿಯಲು ಈ ಕೆಳಗಿನ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಸಿದ್ದು ಉಗ್ರಭಾಗ್ಯ ಹ್ಯಾಶ್ ಟ್ಯಾಗ್ ಬಳಸಿದೆ.

 

 

Share This Article
Leave a Comment

Leave a Reply

Your email address will not be published. Required fields are marked *