ಚಿತ್ರದುರ್ಗ, (ಸೆ.24): ರಾಜ್ಯದಲ್ಲಿ ಪೇಸಿಎಂ ಅಭಿಯಾನ ಕಾಂಗ್ರೆಸ್ ನಾಯಕರಿಂದ ಹೆಚ್ಚಾಗುತ್ತಿದೆ. ಈ ಸಂಬಂಧ ಸಿರಿಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ ಇದು ಕಾಂಗ್ರೆಸ್ ನವರ ಡರ್ಟಿ ಪಾಲಿಟಿಕ್ಸ್ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಇದು ಡರ್ಟಿ ಪಾಲಿಟಿಕ್ಸ್. ಯಾವುದಾದರೂ ವಿಚಾರ ಇದ್ದರೆ ನೇರ ನೇರವಾಗಿ ಮಾತನಾಡಬೇಕು, ದಾಖಲೆ ಕೊಡಬೇಕು, ತನಿಖೆಯಾಗಬೇಕು. ಯಾವುದೇ ವಿಚಾರವಿಲ್ಲದೇ ಸುಮ್ಮನೆ ಆರೋಪ ಮಾಡುತ್ತಿರುವುದು ಕಾಂಗ್ರೆಸ್ ನವರ ನೈತಿಕತೆಯ ಅಧಃಪತನ. ನೈತಿಕತೆಇಲ್ಲದೆ ಹೆಸರು ಕೆಡಿಸುವಂತ ಕಾರ್ಯಕ್ರಮ ಮತ್ತು ಅಧಿಕಾರವಿಲ್ಲದೆ ಹತಾಶರಾಗಿದ್ದಾರೆ. ಯಾವುದೇ ಪೂರ್ಣ ಪ್ರಮಾಣದ ತಯಾರಿಯಿಲ್ಲದೇ ಸದನಕ್ಕೆ ಬರುವುದು. ಜನಪರವಾದ ಕಾಳಜಿ ಇಲ್ಲ. ಈ ರೀತಿ ಪಾಲಿಟಿಕ್ಸ್ ಮಾಡಿಕೊಂಡು ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಅದು ಕರ್ನಾಟಕದಲ್ಲಿ ಸಾಧ್ಯವಿಲ್ಲ. ಇನ್ನು ಪೇ ಸಿಎಂ ಅಭಿಯಾನದ ಬಗ್ಗೆ ತನಿಖೆಯಾಗುತ್ತಿದೆ. ಕಾನೂನು ಪ್ರಕಾರ ಕ್ರಮ ತೆಗೆದು ಕೊಳ್ಳಲಾಗುತ್ತದೆ ಎಂದಿದ್ದಾರೆ.
ಇನ್ನು ಸಚಿವ ಸುಧಾಕರ್ ಅವರ ಲಿಂಗಾಯತ ಸಿಎಂ ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ನಾನು ಅದರ ಭಾಗವಲ್ಲ. ನಾನು ಕಮೆಂಟ್ ಮಾಡುವುದಿಲ್ಲ ಎಂದಿದ್ದಾರೆ. ಸಚಿವ ಸಂಪುಟದ ವಿಚಾರಕ್ಕೆ ಪ್ರತಿಕ್ರಿಯಿಸಿ, ದೆಹಲಿಗೆ ಹೋದಾಗ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ನು ಪೇ ಸಿಎಂ ಅಭಿಯಾನದ ಬಗ್ಗೆ ತನಿಖೆಯಾಗುತ್ತಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.