ಮಂಡ್ಯ : ಕಳೆದ ಎರಡ್ಮೂರು ದಿನದಿಂದ ರಾಜ್ಯದಲ್ಲಿ ಪೇಸಿಎಂ ಅಭಿಯಾನದ ಸುದ್ದಿ ಹೆಚ್ಚಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಕಾದಾಟ ನಡೆಯುತ್ತಿದೆ. ರಾಜ್ಯದಲ್ಲಿ ಪೇಸಿಎಂ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದೀಗ ರೈತರು ರೊಚ್ಚಿಗೆದ್ದಿದ್ದಾರೆ. ಪೇಸಿಎಂ ರೀತಿಯಲ್ಲಿಯೇ ಪೇ ಫಾರ್ಮರ್ ಅಭಿಯಾನ ಆರಂಭಿಸಿದ್ದಾರೆ.
ಪೇ ಟಿ ಎಂ ರೀತಿಯಲ್ಲಿಯೇ ಕ್ಯೂಆರ್ ಕೋಡ್ ತಯಾರಿಸಿ, ಪೋಸ್ಟರ್ ಬಿಡಿಗಡೆ ಮಾಡಿರುವ ಜಿಲ್ಲೆಯ ರೈತ ಸಂಘದವರು, ತಾವೂ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದ್ದಾರೆ. ಪೇ ಫಾರ್ಮರ್ RS 4500 Per ton for sugar cane ಎಂದು ಬರೆದಿದ್ದಾರೆ.
ರಾಜಕೀಯ ನಾಯಕರೇ ನೀವೆಲ್ಲಾ ಒಂದೇ ಮುಖದ ಎರಡು ನಾಣ್ಯಗಳಿದ್ದಂತೆ. ಯಾರೇ ಅಧಿಕಾರಕ್ಕೆ ಬಂದರೂ ರೈತರ ಕಷ್ಟಗಳ ಬಗ್ಗೆ ಗಮನ ಹರಿಸುವ ಮನಸ್ಸಿಲ್ಲ. ಕೆಲವರು ಅಧಿಕಾರ ಏರಲು ಸರ್ಕಸ್ ನಡೆಸುತ್ತಿದ್ದರೆ, ಇನ್ನೂ ಕೆಲವರು ಉಳಿಸಿಕೊಳ್ಳಲು ಸರ್ಕಸ್ ಮಾಡುತ್ತಿದ್ದೀರಾ. ಇವರಿಹೆ ಮತ ಹಾಕಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪೋಸ್ಟರ್ ಮೂಲಕ ಹರಿಹಾಯ್ದಿದ್ದಾರೆ.