ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವಿಲ್ಲ : ರೋಜಾ ವಾಗ್ದಾಳಿ

ನಟಿ ರೋಜಾ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಸಚಿವೆಯಾಗಿದ್ದಾರೆ. ಇದೀಗ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ವಿರುದ್ಧ ಕಿಡಿಕಾರಿದ್ದಾರೆ. ಚಿರಂಜೀವಿ, ನಾಗಬಾಬು ಹಾಗೂ ಪವನ್ ಕಲ್ಯಾಣ್ ಮೂವರ ವಿರುದ್ಧವೂ ರೋಜಾ ಕಿಡಿಕಾರಿದ್ದಾರೆ. ಪವನ್ ಕಲ್ಯಾಣ್ ಗೆ ರಾಜಕೀಯ ಭವಿಷ್ಯವೇ ಇಲ್ಲ ಎಂದರ್ಥದಲ್ಲಿ ಮಾತನಾಡಿದ್ದಾರೆ.

ಈ ಮೂವರನ್ನು ಜನ ತವರು ಜಿಲ್ಲೆಯಲ್ಲಿಯೇ ಸೋಲಿಸಿದ್ದಾರೆ. ಚಂದ್ರಬಾಬು ತಪ್ಪು ಮಾಡಿದಾಗ ಪವನ್ ಕಲ್ಯಾಣ್ ಬಾಯಿಗೆ ಪ್ಲಾಸ್ಟರ್ ಹಾಕಿಕೊಂಡಿರುತ್ತಾರೆ. ಪವನ್ ಕಲ್ಯಾಣ್ ತಪ್ಪು ಮಾಡಿದಾಗ ಚಂದ್ರಬಾಬು ನಾಯ್ಡು, ಸರ್ಕಾರವನ್ನು ಟೀಕಿಸುತ್ತಾರೆ. ಚಂದ್ರಬಾಬುಗೆ, ಪವನ್ ಕಲ್ಯಾಣ್ ಎಷ್ಟು ನಿಷ್ಠೆ ತೋರಿಸುತ್ತಾರೆ ಎಂಬುದನ್ನು ಇದರಿಂದಾನೇ ಅರ್ಥ ಮಾಡಿಕೊಳ್ಳಬಹುದು. ಇತ್ತಿಚೆಗಷ್ಟೇ ಕಂದುಕೂರಿನಲ್ಲಿ ಸತ್ತವರಿಗೆ ಪವನ್ ಕಲ್ಯಾಣ್ ಪರಿಹಾರ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಜೀವದ ವಿಚಾರ ಬಂದಾಗ ಪವನ್ ಕಲ್ಯಾಣ್ ಕತ್ತು ಹಿಸುಕುವುದರಲ್ಲಿ ನಂಬರ್ ಒನ್ ಆಗಿದ್ದಾರೆ ಎಂದಿದ್ದಾರೆ. ಇನ್ನು ಇತ್ತಿಚೆಗಷ್ಟೇ ಪವನ್ ಕಲ್ಯಾಣ್ ಕೂಡ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆಡಳಿತ ಪಕ್ಷ ನನ್ನನ್ನು ಭ್ರಷ್ಟ ಎಂದು ಕರೆಯುತ್ತಿದ್ದಾರೆ. ಇನ್ನೊಮ್ಮೆ ಅದೇ ರೀತಿ ಅಂದರೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಚಪ್ಪಲಿಯನ್ನು ಕೈಗೆತ್ತಿಕೊಟ್ಟಿದ್ದ ವಿಡಿಯೋ ವೈರಲ್ ಆಗಿತ್ತು.

Share This Article
Leave a Comment

Leave a Reply

Your email address will not be published. Required fields are marked *