Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಧ್ಯಂತರ ಜಾಮೀನು ನೀಡಲು ನಿರಾಕರಣೆ : ಪವಿತ್ರಾ ಗೌಡಗೆ ನಿರಾಸೆ

---Advertisement---

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪರಪ್ಪನ ಅಗ್ರಹಾರ ಸೇರಿರುವ ಪವಿತ್ರಾ ಗೌಡಗೆ ಭಾರೀ ನಿರಾಸೆಯಾಗಿದೆ. ಮಗಳಿಗೆ ಪರೀಕ್ಷೆ ಇರುವ ಕಾರಣ, ಅದರ ನೆಪ ಹೇಳಿ ಕೋರ್ಟ್ ಗೆ ಮಧ್ಯಂತರ ಜಾಮೀನು ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಕೋರ್ಟ್ ಆ ಅರ್ಜಿಯನ್ನ ತಿರಸ್ಕಾರ ಮಾಡಿದೆ. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಜಾಮೀನು ನೀಡಲು ಕೋರ್ಟ್ ತಿರಸ್ಕಾರ ಮಾಡಿದೆ.

ಹಿರಗಡೆ ಅದ್ದೂರಿ ಜೀವನ ನಡೆಸಿದ್ದಂತ ಪವಿತ್ರಾ ಗೌಡ, ಈಗ ಜೈಲಿನಲ್ಲಿ ನಾಲ್ಕು ಗೋಡೆಗಳ ಒಳಗೆ ಜೀವನ ನಡೆಸುವಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಲಾಕ್ ಆಗಿರುವ ಪವಿತ್ರಾ, ಜಾಮೀನಿಗಾಗಿ ಬಹಳಷ್ಟು ಕಸರತ್ತು ನಡೆಸುತ್ತಿದ್ದಾರೆ. ಆದರೂ ಜಾಮೀನು ಮಾತ್ರ ಸಿಗುತ್ತಿಲ್ಲ. ಇತ್ತೀಚೆಗಷ್ಟೇ ಮನೆ ಊಟ ಬೇಕೆಂದು ಕೋರ್ಟ್ ಮುಂದರ ಮನವಿ ಮಾಡಿದ್ದರು. ಆದರೆ ಎಲ್ಲಾ ಕೈದಿಗಳು ಇದೇ ಡಿಮ್ಯಾಂಡ್ ಇಡ್ತಾರೆ ಅಂತ ಪೊಕೀಸರು ಅದಕ್ಕೂ ಕೊಕ್ಕು ತಂದರು. ಇದೀಗ ಜಾಮೀನು ಅರ್ಜಿಯೂ ಕ್ಯಾನ್ಸಲ್ ಆಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿಗಳ ವಿಚಾರಣೆ ನಡೆಯುತ್ತಿದೆ. ಕೆಲವೊಂದು ಸಾಕ್ಷಿಗಳು ಪೊಲೀಸರ ಮುಂದೆಯೇ ಒಂದು ಹೇಳಿಕೆ ನೀಡಿ, ಕೋರ್ಟ್ ನಲ್ಲಿ ಆ ಹೇಳಿಕೆಗೆ ಹೋಲಿಕೆಯೇ ಅಲ್ಲದ ಹೇಳಿಕೆಗಳನ್ನ ನೀಡ್ತಾ ಇದ್ದಾರೆ. ಇದು ಆರೋಪಿ ಸ್ಥಾನದಲ್ಲಿರುವವರಿಗೆ ಅನುಕೂಲವನ್ನು ಸೃಷ್ಟಿ ಮಾಡಿಕೊಡಲಿದೆ. ಸದ್ಯ ಟ್ರಯಲ್ ನಡೆಯುತ್ತಿರುವ ಕಾರಣ, ಮಧ್ಯಂತರ ಜಾಮೀನು ನೀಡಲು ಅವಕಾಶ ಕಷ್ಟ ಸಾಧ್ಯ ಎನಿಸುತ್ತದೆ. ಟ್ರಯಲ್ ಬಳಿಕ ಆರೋಪಿಗಳ ಭವಿಷ್ಯ ಏನಾಗಲಿದೆ ಎಂಬುದನ್ಮ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...