ಬೆಂಗಳೂರು: ಪಾರ್ವತಮ್ಮ ರಾಜ್ಕುಮಾರ್ ಅದೊಂದು ಬರೀ ಹೆಸರಾಗಿ ಉಳಿದಿಲ್ಲ. ಅದೊಂದು ದೊಡ್ಡ ಶಕ್ತಿ. ಚೈತನ್ಯ, ದೊಡ್ಮನೆ ಕುಟುಂಬದ ಪಿಲ್ಲರ್ ಇದ್ದ ಹಾಗಿದ್ದರು. ಇಂದು ಅವರ ಪುಣ್ಯ ಸ್ಮರಣೆ. ಈ ದಿನ ರಾಘವೇಂದ್ರ ರಾಜ್ಕುಮಾರ್ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ.
ವಜ್ರೇಶ್ವರಿ ಕಂಬೈನ್ಸ್ ಕೇಳದವರು ಯಾರಾದರೂ ಇದ್ದಾರಾ ಎಂದರೆ ಸಾಧ್ಯವೇ ಇಲ್ಲ. ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿರುವ, ಸಿನಿ ಪ್ರೇಮಿಗಳ ಪ್ರತಿಯೊಬ್ಬರಿಗೂ ಗೊತ್ತು. ಅಷ್ಟೇ ಅಲ್ಕ ವಜ್ರೇಶ್ವರಿಯಲ್ಲಿ ಜೀವನ ಕಂಡುಕೊಂಡವರು, ಕಟ್ಟಿಕೊಂಡವರ ಸಂಖ್ಯೆ ಲೆಕ್ಕಕ್ಕೆ ಇಲ್ಲ. ಅಣ್ಣಾವ್ರು, ಪಾರ್ವತಮ್ನ ಹೋದ ಮೇಲೆ ವಜ್ರೇಶ್ವರಿ ಮಂಕಾಗಿತ್ತು. ಇದೀಗ ರಾಘವೇಂದ್ರ ರಾಜ್ ಕುಮಾರ್ ಆ ಸಂಸ್ಥೆಯಿಂದ ಮತ್ತೆ ಸಿನಿಮಾ ಮಾಡಲು ಆರಂಭಿಸುತ್ತಾರಂತೆ.
ಪಾರ್ವತಮ್ಮ ಅವರೇ ಹುಟ್ಟುಹಾಕಿದ್ದ ವಜ್ರೇಶ್ವರಿ ಸಂಸ್ಥೆಯಲ್ಲಿ ಅವರು ಹೋದ ಮೇಲೆ ಯಾವೊಂದು ಸಿನಿಮಾ ನಿರ್ಮಾಣವಾಗಿರಲಿಲ್ಲ. ಇದೀಗ ಆ ಜವಬ್ದಾರಿಯನ್ನು ರಾಘವೇಂದ್ರ ರಾಜ್ಕುಮಾರ್ ನಿರ್ವಹಿಸಲು ಮುಂದಾಗಿದ್ದಾರೆ. ವಜ್ರೇಶ್ವರಿ ಸಂಸ್ಥೆ ಎಂದರೆ ಅದರಲ್ಲಿ ಬರುವ ಸಿನಿಮಾ ಒಳ್ಳೆಯ ಸಿನಿಮಾವೇ ಆಗಿರಬೇಕು. ಹೀಗಾಗಿ ಪೂರ್ವ ತಯಾರಿ ಮಾಡಿಕೊಂಡೇ ಬರುತ್ತೀವಿ ಎಂದು ಮಾಹಿತಿ ನೀಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ನಿಂದ ಸಾಕಷ್ಟು ಹೊಸ ಕಲಾವಿದರ ಸೃಷ್ಟಿಯಾಗಿ ಟಾಪ್ ನಟ-ನಟಿಯರಾಗಿದ್ದರು. ಇದೀಗ ಮತ್ತೆ ಅಂಥದ್ದೊಂದು ಭರವಸೆ ಹುಟ್ಟಿದೆ.