ವರದಿ: ಸುರೇಶ್ ಪಟ್ಟಣ್
ಚಿತ್ರದುರ್ಗ, (ಫೆ.19) : ಹಿಜಾಬ್ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಮಾಡಲು ಹಾಗು ಕೋಮುಗಲಭೆ ಸೃಷ್ಟಿಸಿ ಇಡೀ ರಾಷ್ಟ್ರವನ್ನು ಭಯಗ್ರಸ್ಥ ಮಾಡಿ ಶಾಂತಿ ಕದಡಲು ಹೊರಟಿರುವ ಸಂಚನ್ನು ವಿಫಲಗೊಳಿಸಿ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನು ರೂಪಿಸಿದವರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಮುಖಾಂತರ ತನಿಖೆಯ ನಡೆಸಲು ಆದೇಶಿಸಬೇಕು ಮತ್ತು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸರ್ಕಾರವನ್ನು ಆಗ್ರಹಿಸಿದೆ.
ಫೆಬ್ರವರಿ 05 ರಂದು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭವಾದ ಹಿಜಾಬ್ ವಿವಾದ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಆಗಿರುವುದರ ಹಿಂದೆ ಭಾರಿ ದೊಡ್ಡ ಷಡ್ಯಂತ್ರ ಅಡಗಿದೆ. ಹಿಜಾಬ್ ಒಂದು ಪ್ರಕರಣ ಮಾತ್ರವಲ್ಲ ಇದೊಂದು ಜಿಹಾದಿನ ಷಡ್ಯಂತ್ರ, ಮುಸಲ್ಮಾನ ವಿದ್ಯಾರ್ಥಿಗಳ ಮೂಲಕ ಶಾಲಾ ಕಾಲೇಜುಗಳನ್ನು ಉಪಯೋಗಿಸಿ ಪ್ರತ್ಯೇಕತಾವಾದವನ್ನು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ.ಈ ಪ್ರಕರಣದ ಹಿಂದೆ ದೇಶದ್ರೊಹಿ ಸಂಘಟನೆಗಳಾದ PಈI ಮತ್ತು SಆPI ಮೂಲಭೂತವಾದಿ ಮುಸ್ಲಿಂ ಸಂಘಟನೆಗಳ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಮುಸ್ಲಿಂ ಮೂಲಭೂತವಾದಿಗಳ ವಿದ್ಯಾರ್ಥಿ ಸಂಘಟನೆ ಉಡುಪಿ ಮತ್ತು ಮಣಿಪಾಲದ ರಹಸ್ಯ ಸ್ಥಳದಲ್ಲಿ ಹಿಜಾಬ್ ಧರಿಸಲು ಅನುಮತಿ ಕೇಳಬೇಕು ಮತ್ತು ಹಿಜಾಬ್ ಬಗ್ಗೆ ವಿವಾದ ಸೃಷ್ಟಿಸಲು ಯುವತಿಯರಿಗೆ ತರಬೇತಿ ನೀಡಿದ್ದಾರೆ.ಅಲ್ಲದೆ ಇದರ ಹಿಂದೆ ಪಾಕಿಸ್ತಾನ, ಅಫಘಾನಿಸ್ಥಾನ-ತಾಲಿಬಾನಿ ಮಾನಸಿಕತೆಯ ಇಸ್ಲಾಂ ಮೂಲಬೂತವಾಧಿಗಳು ಬೆಂಬಲ ಕೊಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ದೂರಿದ್ದಾರೆ.
ಮುಸ್ಲಿಂ ದೇಶಗಳೆಂದೇ ಬಿಂಬಿತವಾಗಿರುವ ದೇಶಗಳಲ್ಲಿ ಹಿಜಾಬ್ ಬುರ್ಖಾ ಕಡ್ಡಾಯವಿಲ್ಲದಾಗ ಭಾರತದ ಹಿಜಾಬ್ ವಿಷಯವನ್ನ ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಯನ್ನು ಕುಗ್ಗಿಸುವಂತಹ ಕೆಲಸವಾಗುತ್ತಿದೆ. ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪನ್ನು ಪಾಲಿಸದೆ ವಿದ್ಯರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರುತ್ತಿರುವುದು ಇವರ ಜಿಹಾದಿ ಮಾನಸಿಕತೆಯನ್ನು ತೋರಿಸುತ್ತಿದೆ. ನವೆಂಬರ್ ತಿಂಗಳಲ್ಲಿ ಹಿಜಾಬ್ ವಿವಾದ ಎಬ್ಬಿಸಿದ ಯುವತಿಯರು ಟ್ವಿಟ್ಟರ್ ತೆರೆದು ರಾಷ್ಟ್ರ ವಿರೋಧಿ ಸಂದೇಶ ಪೋಸ್ಟ್ ಮಾಡುವುದರೊಂದಿಗೆ ಈ ಸಂಘಟನೆ ಮಾಡುವ ಹಿಂದೆ ಈ ಯುವತಿಯರು ಹಿಜಾಬ್ ಪ್ರಕರಣ ಟ್ರೆಂಡ್ ಮಾಡಲು ವ್ಯವಸ್ಥಿತ ಸಂಚು ಮಾಡಿರುವುದರ ಹಿಂದೆ ಅಂತಾರಾಷ್ಟ್ರೀಯ ಇಸ್ಲಾಂ ಮೂಲಭೂತ ಸಂಘಟನೆಗಳ ಕೈವಾಡವಿರುವುದು ಜಗದ್ ಜಾಹಿರಾಗಿದೆ ಎಂದು ಆರೋಪಿಸಿದೆ.
ಮಾನ್ಯ ಉಚ್ಛನ್ಯಾಯಾಲಯ ನೀಡಿರುವ ಮಧ್ಯಾಂತರ ತೀರ್ಪನ್ನು ಕೇವಲ ವಿದ್ಯಾರ್ಥಿನಿಯರು ಅಲ್ಲದೆ ಮುಸ್ಲಿಂ ಶಿಕ್ಷಕಿಯರು ಹಿಜಾಬ್ ಧರಿಸಿ ಬರುತ್ತಿದ್ದು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿರುವುದು ಸಾರ್ವಜನಿಕರಿಗೆ ಆತಂಕವಾಗಿದೆ. ಈ ಹಿನ್ನಲೆಯಲ್ಲಿ ಈ ಪ್ರಕರಣದ ಹಿಂದೆ ದೇಶ ವಿಭಜನೆಯ ಸಂಚು ಮಾಡಲು ಹಾಗು ಕೋಮುಗಲಭೆ ಸೃಷ್ಟಿಸಿ ಇಡಿ ರಾಷ್ಟ್ರವನ್ನು ಭಯಗ್ರಸ್ಥ ಮಾಡಿ ಶಾಂತಿ ಕದಡಲು ಹೊರಟಿರುವ ಸಂಚನ್ನು ವಿಫಲಗೊಳಿಸಿ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ಪ್ರಕರಣವನ್ನು ಪ್ರಾರಂಭಿಸಿದ 6 ವಿದ್ಯಾರ್ಥಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತು ಈ ಸಂಚನ್ನು ರೂಪಿಸಿದವರ ವಿರುದ್ಧರಾಷ್ಟ್ರೀಯ ತನಿಖಾ ದಳ ಮುಖಾಂತರ ತನಿಖೆಯ ನಡೆಸಲು ಆದೇಶಿಸಬೇಕು ಮತ್ತು ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್ ಬಜರಂಗದಳ ಜಿಲ್ಲಾ ಸಂಚಾಲಕ ಸಂದೀಪ್ ಸಹಸಂಚಾಲಕ ಕೇಶವ ನಗರ ಸಂಚಾಲಕ ರಂಗಸ್ವಾಮಿ ಸಹಸಂಚಾಲಕ ಶಕ್ತಿ ಮುಖಂಡರಾದ ಓಂಕಾರ್ ಕಾರ್ಯಕರ್ತರಾದ ರೇಣು,ಕಿಶೋರ್ ,ತೇಜು, ಶ್ರೀಜಿತ್ ,ಅಜಿತ್ ,ಅಖಿಲೇಶ್ ದಿನೇಶ್ ಭಾಗವಹಿಸಿದ್ದರು.