ಸಂಸತ್ತಿನಲ್ಲಿ ಭಾರೀ ಗದ್ದಲ ಗಲಾಟೆ ಉಂಟು ಮಾಡಿದ್ದು ಮಾಜಿ ಭೂಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಮನೋಜ್ ಮುಕುಂದ್ ನರವಾಣೆ ಅವರ ಆತ್ಮಕಥೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ( Four Stars of Destiny) ಪುಸ್ತಕ. ಆದರೆ ಇದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಕೈಸೇರಿದ್ದು ಹೇಗೆ ಎನ್ನುವ ಪ್ರಶ್ನೆ ಈಗ ಹಲವರಲ್ಲಿ ಉಂಟಾಗಿದೆ.
ಎರಡು ವರ್ಷಗಳ ಹಿಂದೆ ನರವಾಣಿ ಅವರ ಪುಸ್ತಕ ಬಿಡುಗಡೆಗೆ ಸಿದ್ದವಾಗಿತ್ತು. ಓದುಗರು, ಆನ್ಲೈನಲ್ಲಿ ಬುಕ್ ಕೂಡಾ ಮಾಡಿದ್ದರು. ಆದರೆ, ಎರಡು ದೇಶಕ್ಕೆ ಸಂಬಂಧಿಸಿದಂತೆ ರಹಸ್ಯವಾದ ಮತ್ತು ವಿವಾದಕಾರಿ ಮಾಹಿತಿ ಇದೆ ಎನ್ನಲಾಗುತ್ತಿರುವ ಆ ಪುಸ್ತಕದ ಬಿಡುಗಡೆಯನ್ನು ತಡೆಹಿಡಿಯಲಾಗಿತ್ತು. , ‘ಅಧಿಕೃತ ರಹಸ್ಯ ಕಾಯಿದೆ 1923 ಅಡಿಯಲ್ಲಿ ನರವಾಣಿ ಪುಸ್ತಕಕ್ಕೆ ಅನುಮತಿ ನಿರಾಕರಣೆ ಮಾಡಲಾಗಿತ್ತು.
ಎರಡು ವರ್ಷದ ನಂತರ ಈಗ ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ ಕೈಯಲ್ಲಿತ್ತು. ಬಜೆಟ್ ಅಧಿವೇಶನದಲ್ಲಿ ಈ ಪುಸ್ತಕದ ವಿಚಾರವನ್ನು ರಾಹುಲ್ ಗಾಂಧಿ, ಪ್ರಸ್ತಾವಿಸುತ್ತಿದ್ದಂತೆ ಬಿಜೆಪಿ ನಾಯಕರು ಶಾಕ್ ಆದರು. ಬಿಡುಗಡೆಯಾಗದ ಪುಸ್ತಕದ ಬಗ್ಗೆ ಲೋಕಸಭೆಯಲ್ಲಿ ಇದನ್ನು ಪ್ರಸ್ತಾವಿಸಲು ಅವಕಾಶವಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಆದರೆ, ಈ ಪುಸ್ತಕವನ್ನು ಇಟ್ಟುಕೊಂಡು, ವಿಪಕ್ಷಗಳ ಪ್ರತಿಭಟನೆ ಜೋರಾಯಿತು. ಹಾಗಾದರೆ, ಈ ಪುಸ್ತಕ ರಾಹುಲ್ ಗಾಂಧಿ ಕೈಸೇರಿದ್ದು ಹೇಗೆ?
ಈ ಪುಸ್ತಕದಲ್ಲಿ, 1962ರ ಭಾರತ ಚೀನಾ ಗಡಿ ಸಂಘರ್ಷ, ಅಗ್ನಿಪಥ್ ನೇಮಕಾತಿ ವಿವಾದ ಮುಂತಾದವು ಆ ಪುಸ್ತಕದಲ್ಲಿ ಉಲ್ಲೇಖವಾಗಿದೆ. ಈ ಪುಸ್ತಕದ ಪ್ರಕಾಶಕರು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ. ರಾಹುಲ್ ಗಾಂಧಿಗೆ ಈ ಪುಸ್ತಕವು ಯಾರ ಕಡೆಯಿಂದ ಸಿಕ್ಕಿತು ಎನ್ನುವ ಪ್ರಶ್ನೆಗೆ ಇದುವರೆಗೆ ಉತ್ತರ ಸಿಕ್ಕಿಲ್ಲ.
ರಾಹುಲ್ ಗಾಂಧಿಗೆ ಈ ಪುಸ್ತಕ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆಗೆ ಎರಡು ಜನರ ಮೇಲೆ ಅನುಮಾನ ಪಡಲಾಗುತ್ತಿದೆ. ಒಂದು, ಪುಸ್ತಕದ ಪ್ರಕಾಶನ ಸಂಸ್ಥೆ ಪೆಂಗ್ವಿನ್, ಇನ್ನೊಂದು, ಈ ಪುಸ್ತಕವು ಕೆಲವೊಂದು ದೆಹಲಿಯ ಮಳಿಗೆಗೆ ಸಪ್ಲೈ ಆಗಿತ್ತು ಎಂದು ಹೇಳಲಾಗುತ್ತಿದೆ, ಅಲ್ಲಿಂದ ಏನಾದರೂ ಇದು ರಾಹುಲ್ ಗಾಂಧಿ ಕೈಸೇರಿತೇ ಎನ್ನುವುದು ಅನುಮಾನಕ್ಕೆ ಕಾರಣವಾಗಿದೆ.

