ಹಾಸನ: ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಸನ್ನಿವೇಶ ಅದೆಷ್ಟು ದೊಡ್ಡ ಮಟ್ಟಕ್ಕೆ ಹೋಗಿದೆ ಅನ್ನೋದನ್ನ ಹೇಳುವಷ್ಟಿಲ್ಲ. ಯಾಕಂದ್ರೆ ಹೈಕೋರ್ಟ್ ನಲ್ಲಿ ಈ ಸಂಬಂಧ ವಿಚಾರಣೆ ನಡೆಯುತ್ತಲೇ ಇದೆ. ಆದ್ರೆ ಆ ಮಕ್ಕಳನ್ನ ನೋಡಿದ್ರೆ ಕೆಲವೊಮ್ಮೆ ಅಯ್ಯೋ ಅನ್ನಿಸುತ್ತೆ. ಈ ಮಧ್ಯೆ ಹಾಸನದಲ್ಲಿ ಸಂತಸದ ಘಟನೆಯೊಂದು ನಡೆದಿದೆ.
ಪರೀಕ್ಷಾ ಸಮಯದಲ್ಲಿ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾಗುತ್ತೆ ಎಂಬ ಅಭಿಪ್ರಾಯದಿಂದ ಪೋಷಕರನ್ನ ಮನವೊಲಿಸಲು ಯತ್ನಿಸಲಾಗಿದೆ. ಮೊದಲಿಗೆ ಒಪ್ಪದೆ ಇದ್ದ ಪೋಷಕರು, SDMC ಅಧ್ಯಕ್ಷರು ಪೋಷಕರ ಜೊತೆ ಸಭೆ ನಡೆಸಿದ ಬಳಿಕ, ಬುರ್ಖಾ ಮತ್ತು ಹಿಜಾಬ್ ತೆಗೆಯಲು ಒಪ್ಪಿಗೆ ಸೂಚಿಸಿದ್ದಾರೆ.
ಬೇಲೂರಿನ ಪ್ರೌಢಶಾಲೆಯಲ್ಲಿ 39 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ಒಪ್ಪಿಗೆ ನೀಡಿದ್ದಾರೆ. ಪೋಷಕರೊಂದಿಗೆ ಸಭೆ ನಡೆದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ಹಿಜಾಬ್, ಬಿರ್ಖಾ ಬೇಸ ದುಪ್ಪಟ್ಟ ಹಾಕಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ರಾಜ್ಯದೆಲ್ಲೆಡೆ ಈ ಹಿಜಬ್ ವಿವಾದ ಜೋರಾಗಿ ನಡೆಯುತ್ತಿದೆ. ಕೊಡಗಿನಲ್ಲಿ ಹಿಜಾಬ್ ಧರಿಸಲು ಬಿಡದೆ ಇದ್ದರೆ ನಾವೂ ಹೊರಗಡೆಯೇ ನಿಲ್ತೇವೆ. ಪರೀಕ್ಷೆ ಬರೆಯಲು ಇಲ್ಲಿಯೇ ಅವಕಾಶ ನೀಡಿ ಎಂದಿದ್ದಾರೆ. ಪರೀಕ್ಷೆ ಎಷ್ಟು ಮುಖ್ಯವೋ ಹಿಜಾಬ್ ಅಷ್ಟೇ ಮುಖ್ಯವೆಂದು ಹಠ ತೊಟ್ಟಿದ್ದಾರೆ. ಉಳಿದಂತೆ ಕೊಪ್ಪಳದಲ್ಲಿ ಹಿಜಾಬ್ ಗಾಗಿ ಪ್ರತಿಭಟನೆ ನಡೆದಿದೆ. ಶಿವಮೊಗ್ಗ, ರಾಯಚೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಎಲ್ಲೆಡೆ ಹಿಜಾಬ್ ಗಾಗಿ ಪ್ರತಿಭಟನೆ ನಡೆಯುತ್ತಿದೆ.