Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೈಸೂರು ಸ್ಪೋಟದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?

ಸಚಿವ ಪರಮೇಶ್ವರ್
---Advertisement---

ಬೆಂಗಳೂರು: ನಿನ್ನೆ ರಾತ್ರಿ ಮೈಸೂರು ಅರಮನೆ ಬಳಿ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿತ್ತು. ಇದು ಮೇಲ್ನೋಟಕ್ಕೆ ನಾರ್ಮಲ್ ಸ್ಪೋಟ ಇರಬಹುದು, ಗ್ಯಾಸ್ ಫಿಲ್ಲಿಂಗ್ ಮಾಡುವಂತಹ ಸಂದರ್ಭದಲ್ಲಿ ಅಚಾನಕ್ಕಾಗಿ ಆಗಿರಬಹುದು ಎನ್ನಲಾಗಿತ್ತು. ಆದರೆ ಈಗ ಹಲವು ಅನುಮಾನಗಳು ವ್ಯಕ್ತವಾಗ್ತಾ ಇದಾವೆ. ಗಂಭೀರ ವಿಚಾರಗಳು ಇದರಲ್ಲಿ ಇರುವುದು ಕಾಣಿಸ್ತಾ ಇದೆ. ಈ ಕೇಸ್ ಸಂಬಂಧ ಮೈಸೂರಿಗೆ ಎನ್ಐಎ ಅಧಿಕಾರಿಗಳು ಎಂಟ್ರಿಯಾಗಲಿದ್ದಾರೆ.

ಮೈಸೂರು ಅರಮನೆ ಬಳಿ ಘಟನೆ ನಡೆದ ಸ್ಥಳವನ್ನ ಎನ್ಐಎ ಪರಿಶೀಲನೆ ನಡೆಸಲಿದ್ದು, ಸ್ಪೋಟದ ಸಂಪೂರ್ಣ ಮಾಹಿತಿಯನ್ನು ಪಡೆಯಲಿದೆ. ಬಂದಂತ ವ್ಯಕ್ತಿ ಯಾರು..? ಸ್ಪೋಟ ಹೇಗಾಯ್ತು ಎಂಬೆಲ್ಲಾ ಅನುಮಾನಗಳು ಕಾಡುತ್ತಿವೆ. ಈ ಸ್ಪೋಟದಿಂದ ಸ್ಥಳೀಯರು, ಪ್ರವಾಸಿಗರು ಕೂಡ ಆತಂಕದಲ್ಲಿದ್ದಾರೆ. ಈ ಸ್ಪೋಟದಲ್ಲಿ ಮೃತನಾದ ವ್ಯಕ್ತಿ ಉತ್ತರ ಪ್ರದೇಶದವನು. ಕಳೆದ 15 ದಿನಗಳ ಹಿಂದಷ್ಟೇ ವ್ಯಾಪಾರಕ್ಕೆಂದು ಮೈಸೂರಿಗೆ ಬಂದಿದ್ದ. ಮೈಸೂರು ಅರಮನೆಯ ಸುತ್ತ ಮಾತ್ರ ಆ ವ್ಯಕ್ತಿ ಬಲೂನ್ ಮಾರುತ್ತಿದ್ದ ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ.

ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಯಾವ ರೀತಿ ಆಗಿದೆ ಎಂಬುದನ್ನ ತನಿಖೆ ಮಾಡಿ ವರದಿ ಕೊಡಬೇಕು ಎಂದು ನಾನು ಹೇಳಿದ್ದೇನೆ. ಈ ಹಿಂದೆ ಇದೇ ರೀತಿ ಬಲೂನ್ ಮಾರುತ್ತಿದ್ದ ಹೆಣ್ಣು ಮಗಳ ಮೇಲೆ ಅತ್ಯಾಚಾರ ಆದ ಘಟನೆಯೂ ಈ ಸಂದರ್ಭದಲ್ಲಿ ನೆನಪಿಗೆ ಬರುತ್ತೆ. ಹಾಗಾಗಿ ಆ ಭಾಗದಲ್ಲಿ ಮಾರಾಟ ಮಾಡುವಂತವರಿಗೆ ಯಾವುದೇ ರೆಗ್ಯೂಲೇಷನ್ಸ್ ಇಲ್ಲ ಅನ್ನಿಸ್ತಾ ಇದೆ. ಈ ಸಂಬಂಧ ನಮ್ಮ ಇಲಾಖೆಯವರಿಗೆ ಸೂಚನೆಯನ್ನ ಕೊಟ್ಟಿದ್ದೇನೆ. ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಿದ್ದೀನಿ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now