ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ಕೇಳಿ ಬರುತ್ತಲೆ ಇದೆ. ರೈತರ ಜಮೀನುಗಳಲ್ಲಿ ವಕ್ಫ್ ಹೆಸರು ಕಾಣಿಸುತ್ತಲೆ ಇದೆ. ಈ ಬಗ್ಗೆ ಮರುಳಾರಾಧ್ಯ ಸ್ವಾಮೀಜಿ ಪ್ರಚೋದನಕಾರಿ ಹೇಳಿಕೆಯೊಂದನ್ನ ನೀಡಿದ್ದರು. ಮಕ್ಕಳ ಕೈಗೆ ಪೆನ್ನು ಬಿಟ್ಟು ತಲ್ವಾರ್ ಕೊಡಿ ಎಂದಿದ್ದರು. ಇದೀಗ ಈ ಹೇಳಿಕೆ ಸಂಬಂಧ ಮರುಳಾರಾಧ್ಯ ಸ್ವಾಮೀಜಿ ವಿರುದ್ಧ ಕ್ರಮಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಮುಂದಾಗಿದ್ದಾರೆ. ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಮರುಳಾರಾಧ್ಯ ಸ್ವಾಮೀಜಿಗಳು ಧರ್ಮವಾಗಿ ನಡೆದುಕೊಳ್ಳಬೇಕು. ಪ್ರಚೋದನಕಾರಿ ಮಾತುಗಳನ್ನು ಆಡಬಾರದು. ಸ್ವಾಮೀಜಿ ಸಮಾಜವನ್ನು ತಿದ್ದಬೇಕು. ದಾರಿ ತಪ್ಪಿದರೆ ಜಾಗೃತಿ ಮೂಡಿಸುವಂತ ಕೆಲಸ ಮಾಡಬೇಕು. ಅದನ್ನು ಬಿಟ್ಟು ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವುದು ತರವಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದಿದ್ದಾರೆ.
ಈ ಸಂಬಂಧ ಈಗಾಗಲೇ ಕಲಬುರಗಿಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಕಲಬುರಗಿಯಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದನ್ನು ತೆಗೆದುಹಾಕಲು ಪ್ರತಿಭಟನೆ ನಡೆಸಲಾಗಿತ್ತು. ಪೊಲೀಸರು ಕೂಡ ಪರಿಸ್ಥಿತಿ ಹತೋಟಿಗೆ ತರಲು ಪ್ರತಿಭಟನೆಯ ಜಾಗದಲ್ಲಿ ಭದ್ರತೆ ಒದಗಿಸಿಕೊಟ್ಟಿದ್ದರು. ಆದರೆ ಪೊಲೀಸರ ಮುಂದೆಯೇ ಭಾಷಣ ಶುರು ಮಾಡಿದ್ದ ಮುರುಳಾರಾಧ್ಯ ಶಿವಚಾರ್ಯ ಸ್ವಾಮೀಜಿ, ಮಕ್ಕಳ ಕೈಯಲ್ಲಿ ಪೆನ್ನು ಬಿಟ್ಟಯ ತಲ್ವಾರ್ ಕೊಡಿ ಎಂದು ಪ್ರಚೋದನಕಾರಿ ಭಾಷಣ ಆರಂಭಿಸಿದರು. ಎಲ್ಲಾ ಯುವಕರ ಮನೆಯಲ್ಲಿ ತಲ್ವಾರ್ ಗಳಿವೆ. ಯಾರು ಬರುತ್ತಾರೋ ಅವರನ್ನು ಕಡಿಯುತ್ತೇವೆ ಎನ್ನುತ್ತಿದ್ದಾರೆ. ಅವರು (ಅಲ್ಪಸಂಖ್ಯಾತರು) ಭಾರತ ದೇಶವನ್ನು ಪಾಕಿಸ್ತಾನ ಮಾಡುತ್ತೇವೆ ಎನ್ನುತ್ತಿದ್ದಾರೆ. ಇನ್ನು ಎಚ್ಚೆತ್ತುಕೊಳ್ಳದೆ ಇದ್ದರೆ ಭಾರತ ದೇಶವೇ ಇರಲ್ಲ. ಅದಕ್ಕೆ ಇನ್ಮುಂದೆ ಮಕ್ಕಳ ಕೈಲಿ ಪೆನ್ನು ಬದಲು ತಲ್ವಾರ್ ಕೊಡಿ ಎಂಬ ಭಾಷಣ ಮಾಡಿದ್ದರು.