Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಫೆಬ್ರವರಿ 28 ರಂದು ಗ್ರಹಗಳ ಪರೇಡ್

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 26 : ಇದೇ ಫೆಬ್ರವರಿ 28 ರ ಸಂಜೆಯ ಆಕಾಶದಲ್ಲಿ ಚಮತ್ಕಾರ ಸಂಭವಿಸಲಿದೆ. ಆ ದಿನದಂದು ಗ್ರಹಗಳ ಪರೇಡ್ ಅಂದರೆ ಒಂದೇ ಸಾಲಿನಲ್ಲಿ 6 ಗ್ರಹಗಳನ್ನು ಬರಿಗಣ್ಣಿನಲ್ಲಿ ನೋಡಬಹುದಾಗಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್.ಎಸ್. ಟಿ.ಸ್ವಾಮಿ ತಿಳಿಸಿದ್ದಾರೆ.

 

ಅಂದು ಪಶ್ಚಿಮ ದಿಗಂತದ ಕಡೆ ಕಣ್ಣು ಹಾಯಿಸಿದರೆ, ದಿಗಂತದಲ್ಲಿ ಬುಧ, ಹೊಳೆಯುವ ಶುಕ್ರ, ಕೆಂಪುಬಣ್ಣದ ಶನಿಗ್ರಹ, ತುಸು ಎತ್ತರದಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಗುರುಗ್ರಹಗಳನ್ನು ನೋಡಬಹುದಾಗಿದೆ. ಈ ಅಪರೂಪದ ಜೋಡಣೆಯು ಬರಿಗಣ್ಣಿಗೆ ಒಂದು ರೇಖೆಯಂತೆ ಕಂಡರೂ, ವಾಸವದಲ್ಲಿ ಗ್ರಹಗಳು ಬಾಹ್ಯಾಕಾಶದಲ್ಲಿ ತಮ್ಮದೇ ಆದ ಕಕ್ಷೆಗಳಲ್ಲಿರುತ್ತವೆ.

 

ಈ ಘಟನೆಯನ್ನು ಸಂಜೆ 6.30 ರಿಂದ 8 ಗಂಟೆಯವರೆಗೂ ಅರ್ಧ ಗಂಟೆಗಳ ಕಾಲ ನೋಡಬಹುದಾಗಿದೆ. ಯುರೇನಸ್ ಹಾಗೂ ನೆಪ್ಚೂನ್ ಗ್ರಹಗಳನ್ನು ಬೈನಾಕ್ಯುಲರ್ ಇಲ್ಲವೇ ಉತ್ತಮ ದೂರದರ್ಶಕಗಳ ಮೂಲಕವೇ ನೋಡಬೇಕು. ಮತ್ತೆ ಈ ಘಟನೆ ನೋಡಲು 2040 ರ ತನಕ ಕಾಯಬೇಕು ಎಂದು H S T ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now