ಸತತ ಸೋಲಿನಿಂದ ಕಂಗೆಟ್ಟ ಪಾಂಡ್ಯ : ಗೆಲುವಿಗಾಗಿ ಸೋಮನಾಥನ ಮೊರೆ

ಐಪಿಎಲ್ ಆರಂಭವಾದಾಗಿನಿಂದ ಮುಂಬೈ ಇಂಡಿಯನ್ಸ್ ಮೂರು ಬಾರಿ ಸೋಲು ಕಂಡಿದೆ. ಭಾನುವಾರ ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಆಡಲಿದೆ. ಮತ್ತೆ ಸೋಲು ಕಾಣಬಾರದು ಎಂಬ ಕಾರಣಕ್ಕೆ ಹಾರ್ದಿಕ್ ಪಾಂಡ್ಯ ದೇವರ ಮೊರೆ ಹೋಗಿದ್ದಾರೆ. ಗುಜರಾತ್ ನ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

 

ಬ್ಯಾಕ್ ಟು ಬ್ಯಾಕ್ ಸೋಲಿನಿಂದಾಗಿ ಹಾರ್ದಿಕ್ ಪಾಂಡ್ಯ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ, ಸಾಕಷ್ಟು ನಿಂದನೆ ಎದುರಿಸಿದ್ದಾರೆ. ಇದೀಗ ಸೋಲಿನ ಭಯದಿಂದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಗೆಲುವನ್ನು ತಂದು ಕೊಡಲು ಪ್ರಾರ್ಥಿಸಿದ್ದಾರೆ.

2022, 2023ರ ಐಪಿಎಲ್​ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಗುಜರಾತ್​​ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿದ್ದರು. 2024ರ ಐಪಿಎಲ್​​​​​ ವೇಳೆ ಮುಂಬೈ ಇಂಡಿಯನ್ಸ್​ ಪಾಂಡ್ಯರನ್ನು ಗುಜರಾತ್​ ಟೈಟನ್ಸ್ ತಂಡದಿಂದ ಕರೆದುಕೊಂಡು ಬಂದು, ಕ್ಯಾಪ್ಟನ್ಸಿ ನೀಡಿದೆ. ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಸ್ಥಾನದಿಂದ ಕೊಕ್ ನೀಡಿದ ಮೇಲೆ ಮುಂಬೈ ತಂಡದಲ್ಲಿ ಎಲ್ಲವೂ ಸರಿ ಇಲ್ಲ. ಸರಿಯಾದ ಹೊಂದಾಣಿಕೆ ಸಿಗದ ಪರಿಣಾಮ ಸೋಲು ಅನುಭವಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇನ್ನು ಭಾನುವಾರ್ ಪಂದ್ಯ ಆರಂಭಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *