ತುತ್ತು ಅನ್ನಕ್ಕೂ ಪರದಾಡುತ್ತಿದ್ದಾರೆ ಪಾಕಿಸ್ತಾನಿಯರು : ಅಡುಗೆ ಪದಾರ್ಥದ ಬೆಲೆ ಎಷ್ಟು ಗೊತ್ತಾ..?

ಪಾಕಿಸ್ತಾನದಲ್ಲಿ ಈಗ ತುತ್ತು ಅನ್ನಕ್ಕೂ ಪರದಾಟ ಶುರುವಾಗಿದೆ. ಪ್ರವಾಹ, ಆರ್ಥಿಕ ಬಿಕ್ಕಟ್ಟು, ರಾಜಕೀಯ ಬಿಕ್ಕಟ್ಟು ಜನರನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿದೆ. ಹಣ ಇರುವವರು, ರಾಜಕಾರಣಿಗಳು ತಮ್ಮ ಜೀವನದ ಸೇಫ್ಟಿ ನೋಡಿಕೊಳ್ಳುತ್ತಿದ್ದಾರೆ. ಆದರೆ ಸಾಮಾನ್ಯ ಜನರ ಸ್ಥಿತಿ ಹದಗೆಟ್ಟು ಹೋಗಿದೆ.

ಅಲ್ಲಿಯೇ ಬೆಳೆಯುವ ಗೋಧಿಯನ್ನು ಈಗ ಜನ ಕೊಂಡು ತಿನ್ನುತ್ತಿದ್ದಾರೆ. ಅದಕ್ಕೆ ಕಾರಣ ಸರ್ಕಾರ ಗೋಧಿಗೆ ನಿಗದಿತ ಬೆಲೆ ಕೊಡದೆ ಇರುವುದೇ ರೈತರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಬೆಳೆಗಾರರು ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಈಗ ಗೋಧಿಯನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿದೆ.

ಈಗಾಗಲೇ ಪಾಕಿಸ್ತಾನದ ಸ್ಥಿತಿ ಕಂಡು ಯುನೈಟೆಡ್ ಅರಬ್ ಎಮಿರೇಟ್ಸ್ ಸಹಾಯ ಹಸ್ತ ಚಾಚಿದೆ. ಸುಮಾರು 16,302 ಕೋಟಿ ನೆರವು ಹಾಗೂ 8.151ಕೋಟಿ ಸಾಲವಾಗಿ ನೀಡಿದೆ. ಸದ್ಯ ಪಾಕಿಸ್ತಾನದಲ್ಲಿ ಒಂದು ಕೆಜಿ ಈರುಳ್ಳಿಗೆ 215 ರೂ, ಒಂದು ಕೆಜಿ ಚಿಕನ್ 700, ಒಂದು ಕೆಜಿ ಗೋಧಿ ಹಿಟ್ಟಿಗೆ 160 ಹೀಗೆ ಎಲ್ಲಾ ಆಹಾರ ಪದಾರ್ಥಗಳ ಬೆಲೆಯೂ ಗಗನಕ್ಕೇರಿದೆ. ಹೀಗಾಗಿ ಜನ ಸಾಮಾನ್ಯರು ರೊಚ್ಚಿಗೆದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *