ಪಾಕಿಸ್ತಾನ VS ಆಸ್ಟ್ರೇಲಿಯಾ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಎಂ-ಡಿಸಿಎಂ ಕ್ರಿಕೆಟ್ ವೀಕ್ಷಣೆ 

1 Min Read

ಬೆಂಗಳೂರು: ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವರ್ಲ್ಡ್ ಕಪ್ ಮ್ಯಾಚ್ ನಡೆದಿದೆ. ಈ ಮ್ಯಾಚ್ ನೋಡುವುದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೋಗಿದ್ದರು. ಪಾಕಿಸ್ತಾನ ವರ್ಸಸ್ ಆಸ್ಟ್ರೇಲಿಯಾ ಮ್ಯಾಚ್ ನೋಡಿ, ಸಿಎಂ ಸಿದ್ದರಾಮಯ್ಯ ಎಂಜಾಯ್ ಮಾಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಸಚಿವರನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಸ್ವಾಗತ ಮಾಡಿದ್ದರು. ಸಚಿವ ಭೈರತಿ ಸುರೇಶ್, ಗೋವಿಂದ್ ರಾಜ್, ಡಿಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆ ಐಪಿಎಲ್ ವೇಳೆಯೂ ಮ್ಯಾಚ್ ನೋಡಲು ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಕ್ರಿಕೆಟ್ ನೋಡಿ ಎಂಜಾಯ್ ಮಾಡಿದ್ದರು. ಇನ್ನು ಈ ಬಾರಿ ವರ್ಲ್ಡ್ ಕಪ್ ನೋಡಲು ಜನಕ್ಕೆ ಮೆಟ್ರೋ ಹಾಗೂ ಬಿಎಂಟಿಸಿ ಸಹಾಯ ಮಾಡುತ್ತಿದೆ. ಹೆಚ್ಚುವರಿ ಸೇವೆಯನ್ನು ಕ್ರಿಕೆಟ್ ಪ್ರೇಮಿಗಳಿಗೆ ಒದಗಿಸುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks