ಸುದ್ದಿಒನ್ ಸ್ಪೋರ್ಟ್ಸ್ ಡೆಸ್ಕ್ : ಏಷ್ಯಾಕಪ್ ಫೈನಲ್ ಮತ್ತೊಮ್ಮೆ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯಲಿದೆ. ಗುರುವಾರ ನಡೆದ ತೀವ್ರ ಪೈಪೋಟಿಯ ‘ಸೂಪರ್ -4’ ಪಂದ್ಯದಲ್ಲಿ ಪಾಕಿಸ್ತಾನವನ್ನು 2 ವಿಕೆಟ್ ಗಳಿಂದ ಮಣಿಸಿ ಶ್ರೀಲಂಕಾ ಈ ಟೂರ್ನಿಯಲ್ಲಿ 11ನೇ ಬಾರಿ ಫೈನಲ್ ಪ್ರವೇಶಿಸಿದೆ. ಕೊನೆಯ ಎಸೆತದವರೆಗೂ ರೋಚಕ ಹೋರಾಟ ನಡೆಸಿ ಅಂತಿಮವಾಗಿ ಮೇಲುಗೈ ಸಾಧಿಸಿತು. ಮಳೆಯಿಂದಾಗಿ ಪಂದ್ಯವನ್ನು ಮೊದಲು 45 ಓವರ್‌ಗಳಿಗೆ ಮತ್ತು ನಂತರ 42 ಓವರ್‌ಗಳಿಗೆ ಮೊಟಕುಗೊಳಿಸಲಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 42 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು. ಮೊಹಮ್ಮದ್ ರಿಜ್ವಾನ್ (73 ಎಸೆತಗಳಲ್ಲಿ ಔಟಾಗದೆ 86; 6 ಬೌಂಡರಿ, 2 ಸಿಕ್ಸರ್), ಅಬ್ದುಲ್ಲಾ ಶಫೀಕ್ (69 ಎಸೆತಗಳಲ್ಲಿ 52; 3 ಬೌಂಡರಿ, 2 ಸಿಕ್ಸರ್) ಮತ್ತು ಇಪ್ಲಿಕರ್ ಅಹ್ಮದ್ (40 ಎಸೆತಗಳಲ್ಲಿ 47; 4 ಬೌಂಡರಿ, 2 ಸಿಕ್ಸರ್) ಉತ್ತಮ ಆಟವನ್ನು ಆಡಿದರು. ಒಂದು ಹಂತದಲ್ಲಿ ತಂಡದ ಸ್ಕೋರ್ 130/5 ಇದ್ದಾಗ ರಿಜ್ವಾನ್ ಮತ್ತು ಇಪ್ಲಿಕರ್ ಆರನೇ ವಿಕೆಟ್ ಗೆ 108 ರನ್ ಸೇರಿಸಿದರು.
ನಂತರ ಲಂಕಾದ ಗುರಿಯನ್ನು ಡಕ್‌ವರ್ತ್ ಲೂಯಿಸ್ ನಿಯಮಗಳ ಪ್ರಕಾರ 42 ಓವರುಗಳಿಗೆ 252 ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಈ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ 42 ಓವರ್‌ಗಳಲ್ಲಿ 8 ವಿಕೆಟ್‌ಗೆ 252 ರನ್ ಗಳಿಸಿ ಜಯ ಸಾಧಿಸಿತು.
ಕುಶಾಲ್ ಮೆಂಡಿಸ್ (87 ಎಸೆತಗಳಲ್ಲಿ 91; 8 ಬೌಂಡರಿ, 1 ಸಿಕ್ಸರ್), ಸದೀರ ಸಮರವಿಕ್ರಮ (51 ಎಸೆತಗಳಲ್ಲಿ 48; 4 ಬೌಂಡರಿ) ಮತ್ತು ಅಸಲಂಕಾ (47 ಎಸೆತಗಳಲ್ಲಿ 49; 3 ಬೌಂಡರಿ, 1 ಸಿಕ್ಸರ್) ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಗೆಲುವಿನೊಂದಿಗೆ ಶ್ರೀಲಂಕಾ ಸೂಪರ್ 4 ಹಂತದಲ್ಲಿ ಎರಡನೇ ಸ್ಥಾನ ಪಡೆದು ಫೈನಲ್ ತಲುಪಿದೆ.
ಸ್ಕೋರ್ ವಿವರಗಳು
ಪಾಕಿಸ್ತಾನ ಇನಿಂಗ್ಸ್:
1) ಶಫೀಕ್ (ಸಿ) ಮಧುಶನ್ (ಬಿ) ಪತಿರಾನ 52;
2) ಫಖ್ರ್ (ಬಿ) ಮಧುಶನ್ 4;
3) ಬಾಬರ್ (ಸ್ಟಂಪ್ಡ್) ಮೆಂಡಿಸ್ (ಬಿ) ವೆಲಾಲಾಗೆ 29;
4)ರಿಜ್ವಾನ್ (ಔಟಾಗದೆ) 86;
5) ಹ್ಯಾರಿಸ್ (C&B) ಪತಿರಾನ 3;
6) ನವಾಜ್ (ಬಿ) ತಿಕ್ಷನ್ 12;
7) ಇಫ್ತಿಕಾರ್ (ಸಿ) ಶನಕ (ಬಿ) ಪತಿರಾನ 47;
8)ಶಾದಾಬ್ (ಸಿ) ಮೆಂಡಿಸ್ (ಬಿ) ಮಧುಶನ್ 3;
8) ಶಾಹೀನ್ (ಔಟಾಗದೆ)1
ಎಕ್ಸ್ಟ್ರಾಗಳು 15; ಒಟ್ಟು
(42 ಓವರ್‌ಗಳಲ್ಲಿ 7 ವಿಕೆಟ್‌ಗೆ) 252. ವಿಕೆಟ್‌ಗಳ ಪತನ: 1–9, 2–73, 3–100, 4–108, 5–130, 6–238, 7–243.
ಬೌಲಿಂಗ್: ಮಧುಶನ್ 7-1-58-2, ತಿಕ್ಷಣ 9-0-42-1, ಶನಕ 3-0-18-0, ವೆಲಾಲಗೆ 9-0-40-1, ಪತಿರಣ 8-0-65-3, ಧನಂಜಯ 6- 0–28–0.
ಶ್ರೀಲಂಕಾ ಇನಿಂಗ್ಸ್:
1) ನಿಸಂಕಾ (C&B) ಶಾದಾಬ್ 29;
ಪೆರೇರಾ (ರನ್ ಔಟ್) 17;
2) ಮೆಂಡಿಸ್ (ಸಿ) ಹ್ಯಾರಿಸ್ (ಬಿ) ಇಫ್ತಿಕರ್ 91;
3) ಸಮರವಿಕ್ರಮ (ಸ್ಟಂಪ್ಡ್) ರಿಜ್ವಾನ್ (ಬಿ) ಇಫ್ತಿಕರ್ 48;
4) ಅಸಲಂಕಾ (ಔಟಾಗದೆ) 49 ;
5) ಶನಕ (ಸಿ) ನವಾಜ್ (ಬಿ) ಇಫ್ತಿಕರ್ 2;
6) ಧನಂಜಯ (ಸಿ) ವಾಸಿಂ (ಬಿ) ಶಾಹೀನ್ 5;
7) ವೆಲಾಲಗೆ (ಸಿ) ರಿಜ್ವಾನ್ (ಬಿ) ಶಾಹೀನ್ 0;
8) ಮಧುಶನ್ (ರನೌಟ್) 1;
9)ಪತಿರಾನ (ಔಟಾಗದೆ) 0
ಎಕ್ಸ್ಟ್ರಾಗಳು 10; ಒಟ್ಟು (42 ಓವರ್‌ಗಳಲ್ಲಿ 8 ವಿಕೆಟ್‌ಗೆ) 252. ವಿಕೆಟ್‌ಗಳ ಪತನ: 1–20, 2–77, 3–177, 4–210, 5–222, 6–243, 7–243, 8–246. ಬೌಲಿಂಗ್: ಶಾಹೀನ್ 9-0-52-2, ಜಮಾನ್ 6-1-39-0, ವಾಸಿಮ್ 3-0-25-0, ನವಾಜ್ 7-0-26-0, ಶಾಬಾದ್ 9-0-55-1, ಇಫ್ತಿಕರ್ 8- 0–50–3.
ಫೈನಲ್ ಪಂದ್ಯ ಭಾನುವಾರ ನಡೆಯಲಿದೆ.