ಪೇಜಾವರ ಶ್ರೀಗಳ ಮೇಲೆ ಬಿದ್ದ ತಕ್ಕಡಿ : ಈಗ ಶ್ರೀಗಳ ಆರೋಗ್ಯ ಹೇಗಿದೆ..?

ದೆಹಲಿ: ತುಲಭಾರ ನಡೆಸುತ್ತಿದ್ದ ವೇಳೆ ಪೇಜಾವರ ಶ್ರೀಗಳ ತಲೆಯ ಮೇಲೆ ತಕ್ಕಡಿಯ ಸರಳುಗಳು ಬಿದ್ದಿವೆ. ಸದ್ಯ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಗಳು ಅಪಾಯದಿಂದ ಪಾರಾಗಿದ್ದಾರೆ. ದೆಹಲಿಯ ಪೇಜಾವರದ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಪೇಜಾವರ ಶ್ರೀಗಳಿಗೆ 60 ವರ್ಷ ತುಂಬಿದೆ. ಈ ಸುಸಮಯದಲ್ಲಿ ಶ್ರೀಗಳ ಪ್ರಸನ್ನಾಭಿನಂದನ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಭಕ್ತರೆಲ್ಲಾ ಸೇರಿ ಶ್ರೀಗಳಿಗೆ ತುಲಭಾರ ನಡೆಸಿದ್ದಾರೆ. ತುಲಭಾರದ ವೇಳೆ ಅವಘಡ ಒಂದು ಸಂಭವಿಸಿದ್ದು, ತಕ್ಕಡಿಯ ಚೈನ್ ಕಟ್ ಆಗಿ ಶ್ರೀಗಳ ತಲೆಯ ಮೇಲೆ ಬಿದ್ದಿದೆ.

ಶ್ರೀಗಳ ಮೇಲೆ ಶ್ರೀಕೃಷ್ಣ ಪರಮಾಪ್ತನ ಆಶೀರ್ವಾದವಿತ್ತು ಎನಿಸುತ್ತದೆ. ಅದಕ್ಕೆ ಶ್ರೀಗಳಿಗೆ ಅಷ್ಟೇನು ತೊಂದರೆ ಆಗಿಲ್ಲ. ತಲೆಗೆ ಕೊಂಚ ಪರಚಿದ ಗಾಯದಂತೆ ಆಗಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎನ್ನಲಾಗಿದ್ದು, ಅದರ ಜೊತೆಗೆ ಘಟನೆಯ ಬಳಿಕ ನಾಲ್ಕೈದು ಕಾರ್ಯಕ್ರಮದಲ್ಲೂ ಭಾಗವಹಿಸಿದ್ದಾರೆ ಎನ್ನಲಾಗಿದೆ. ಶ್ರೀಗಳು ಆರೋಗ್ಯವಾಗಿದ್ದಾರೆ ಎಂಬುದನ್ನು ಕೇಳಿದ ಭಕ್ತವೃಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *