ಚಿತ್ರದುರ್ಗದಲ್ಲಿ ಮಕ್ಕಳಿಗೆ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆ : ಫೆಬ್ರವರಿ 10 ರೊಳಗೆ ಅರ್ಜಿ ಸಲ್ಲಿಸಿ…!

1 Min Read

 

ಚಿತ್ರದುರ್ಗ,(ಫೆ.07) : ಜಿಲ್ಲಾ ಬಾಲ ಭವನ ವತಿಯಿಂದ ಫೆ.13 ರಂದು ಜಿಲ್ಲಾ ಬಾಲಭವನ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ.

5 ರಿಂದ 8 ವರ್ಷ, 19 ರಿಂದ 12 ವರ್ಷ, 13 ರಿಂದ 16 ವರ್ಷದ ಒಳಗಿನ ಮಕ್ಕಳಿಗೆ ವಯೋಮಿತಿಗೆ ಅನುಗುಣವಾಗಿ 3 ಗುಂಪುಗಳಲ್ಲಿ ಚಿತ್ರಕಲೆ ಹಾಗೂ 5 ರಿಂದ 7 ವರ್ಷ, 8 ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ವಯೋಮಿತಿಗೆ ಅನುಗುಣವಾಗಿ 2 ಗುಂಪುಗಳಲ್ಲಿ ಜಿಲ್ಲಾ ಬಾಲಭವನ ಆವರಣದಲ್ಲಿ ಸ್ಪರ್ಧೆಗಳು ನಡೆಯಲಿವೆ.

ಆಸಕ್ತರು ಫೆ.10ರ ಸಂಜೆ 5.30ರ ಒಳಗಾಗಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾರ್ಯದರ್ಶಿಗಳು, ಜಿಲ್ಲಾ ಬಾಲಭವನ ಸಮಿತಿ, ಜಿಲ್ಲಾ ಬಾಲಭವನ ಆವರಣ, ವೀರವನಿತೆ ಓಬವ್ವ ಕ್ರೀಡಾಂಗಣದ ಮುಂಭಾಗ, ರಾಜೇಂದ್ರ ನಗರ, ಚಿತ್ರದುರ್ಗ, ಮೊಬೈಲ್ ಸಂಖ್ಯೆ 7259551325 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *