ಸುದ್ದಿಒನ್, ಹಿರಿಯೂರು, ಏಪ್ರಿಲ್. 23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪ್ರದೇಶದ ಪ್ರವಾಸಿಗರ ಮೇಲೆ ಮನಬಂದಂತೆ ನಡೆಸಿರುವ ಭಯೋತ್ಪಾದಕರ ದಾಳಿಯನ್ನು ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ಬಿಬಿಎಂಪಿ ರಾಜಣ್ಣ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ರಾಜಣ್ಣ ಅವರು ಇಂತಹ ಭಯೋತ್ಪಾದಕ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಕಣಿವೆ ರಾಜ್ಯದಲ್ಲಿ 370ಕಲಂ ಜಾರಿಗೆ ತಂದಿದ್ದಾರೆ ಎಂಬ ಕಾರಣದಿಂದ ಮನುಷ್ಯತ್ವ ಇಲ್ಲದ ಕ್ರೂರಿಗಳು ಮಂಗಳವಾರ ಮಧ್ಯಾಹ್ನ ಸಮಯದಲ್ಲಿ ಪ್ರವಾಸಿಗರ ಗುಂಡಿನ ಸುರಿಮಳೆಗೈದಿರುವುದು ಅತ್ಯಂತ ನೋವು ತರಿಸಿದೆ. ಅದರಲ್ಲೂ ಹಿಂದೂಗಳನ್ನು ಹುಡುಕಿ ಹುಡುಕಿಕೊಂಡು ಟಾರ್ಗೆಟ್ ಮಾಡಿರುವುದು ರಾಕ್ಷಸ ಕೃತ್ಯವಾಗಿದೆ.
ಭಯೋತ್ಪಾದಕ ಉಗ್ರಗಾಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅಮೇರಿಕಾ, ರಷ್ಯಾ, ಅನೇಕ ದೇಶಗಳು ಘಟನೆಯನ್ನು ಖಂಡಿಸಿವೆ.
ಪಾಕಿಸ್ತಾನದ ಪ್ರಚೋದಿತ ಉಗ್ರಗಾಮಿಗಳ ಸಂಘಟನೆಗಳನ್ನು ಬ್ಯಾನ್ ಮಾಡಲು ವಿಶ್ವಸಂಸ್ಥೆ ಕ್ರಮ ಕೈಗೊಳ್ಳಬೇಕು. ಕನ್ನಡಿಗರು ಒಳಗೊಂಡಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಹುತಾತ್ಮ ರಾಗಿರುವರ ಆತ್ಮಕ್ಕೆ ಶಾಂತಿ ಸಿಗಲಿ, ಸದಸ್ಯನನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಘಟನೆಯಲ್ಲಿ ಗಾಯಗೊಂಡಿರುವರು ಬೇಗ ಚೇತರಿಸಿಕೊಳ್ಳಲಿ, ಭಯೋತ್ಪಾದನೆ ಎದುರಿಸಲು ಇಡೀ ದೇಶವೇ ಒಗ್ಗಟ್ಟಿನಿಂದ ನಿಂತಿದೆ. ಉಗ್ರರ ದಾಳಿಗಳು ಮಾನವಿಯತೆಗೆ ಕಳಂಕವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾಗಿದೆ.






