ಚಿತ್ರದುರ್ಗ, (ಜೂ.09) : ನಗರದ ಜೋಗಿಮಟ್ಟಿ ರಸ್ತೆ ನಿವಾಸಿ ವೇದ ಬ್ರಹ್ಮ ಪದ್ಮನಾಭ ಅವಧಾನಿಗಳು (ಪದ್ದಣ್ಣ) (75) ಇಂದು ಬೆಳಿಗ್ಗೆ 11:30 ಕ್ಕೆ ನಿಧನರಾದರು.
ಹಲವಾರು ವರ್ಷಗಳಿಂದ ಶ್ರೀ ಕೂಡಲಿ ಶೃಂಗೇರಿ ಮಠದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದರು. ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.