ನವದೆಹಲಿ: ನ್ಯಾಚನಲ್ ಹೆರಾಲ್ಡ್ ಪತ್ರಿಕೆಯ ಹಗರಣದ ವಿಚಾರವಾಗಿ ಇಡಿ ಇತ್ತಿಚೆಗೆ ರಾಹುಲ್ ಗಾಂಧಿ ಮತ್ತು ಸೋನಿಯಾಗಾಂಧಿಗೆ ನೋಟೀಸ್ ನೀಡಿದೆ. ಅದರಂತೆ ರಾಹುಲ್ ಗಾಂಧಿ ನಿನ್ನೆ ಇಡಿ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದರು. ಹಾಜರಿಗೂ ಮುನ್ನ, ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನಾಯಕರು ಬೃಹತ್ ಪಾದಯಾತ್ರೆಯೊಂದಿಗೆ ಇಡಿ ಕಚೇರಿಗೆ ಕರೆದುಕೊಂಡು ಬಂದರು.
मोदी सरकार बर्बरता की हर हद पार कर गई।
पूर्व गृह मंत्री, श्री पी.चिदंबरम के साथ पुलिस की धक्कामुक्की हुई, चश्मा ज़मीन पर फेंका, उनकी बायीं पसलियों में हेयरलाइन फ्रैक्चर है।
सांसद प्रमोद तिवाड़ी को सड़क पर फेंका गया। सिर में चोट और पसली में फ्रैक्चर है।
क्या यह प्रजातंत्र है? pic.twitter.com/rRLOhIOTJ3
— Randeep Singh Surjewala (@rssurjewala) June 13, 2022
ಈ ವೇಳೆ ಸದ್ದು ಗದ್ದಲ ಹೆಚ್ಚಾದ ಕಾರಣ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದರು. ಅದರಲ್ಲಿ ಕಾಂಗ್ರೆಸ್ ಜಿರಿಯ ನಾಯಕ ಪಿ ಚಿದಂಬರಂ ಕೂಡ ಒಬ್ಬರು. ಇದೀಗ ಪಿ ಚಿದಂಬರಂ ಅವರಿಗೆ ಅನಾರೋಗ್ಯ ಕಾಡಿದ್ದು, ಕಾಂಗ್ರೆಸ್ ನಾಯಕರು ಪೊಲೀಸರ ಮೇಲೆ ಗರಂ ಆಗಿದ್ದಾರೆ.
ಪಿ ಚಿದಂಬರಂ ಅವರು ಪಕ್ಕೆಲುಬು ಮುರಿತಕ್ಕೆ ಒಳಗಾಗಿದ್ದಾರೆ. ನಿನ್ನೆ ಪ್ರತಿಭಟನೆಯಲ್ಲಿ ಪೊಲೀಸರಿಂದ ಮ್ಯಾನ್ ಹ್ಯಾಂಡ್ಲಿಂಗ್ ಮಾಡಲಾಗಿದೆ. ಹೀಗಾಗಿಯೇ ಅವರ ಪಕ್ಕೆಲುಬು ಮುರಿತಕ್ಕೊಲಾಗಿದೆ ಎಂದು ಆರೋಪಿಸಿರಣದೀಪ್ ಸುರ್ಜೇವಾಲ್ ಟ್ವೀಟ್ ಮಾಡಿದ್ದು, ಚಿದಂಬರಂ ಅವರನ್ನು ಪೊಲೀಸರು ತಳ್ಳಿದ ಪರಿಣಾಮ ಲೆಫ್ಟ್ ರಿಬ್ ಫ್ಯಾಕ್ಚರ್ ಆಗಿದೆ. ಅವರ ಕನ್ನಡಕವನ್ನೂ ನೆಲಕ್ಕೆ ಬೀಳಿಸಿದ್ದಾರೆ ಎಂದು ಆರೋಪಿಸಲಾಗಿದೆ.