ಪೆಟ್ರೋಲ್ ಬೆಲೆ ಏರಿಕೆಗೆ ಔರಂಗಜೇಬ್ ಕಾರಣ.. ಪ್ರಧಾನಿಯಲ್ಲ : ಓವೈಸಿ

ಚಕ್ರವರ್ತಿ ಷಹಜಹಾನ್ ತಾಜ್ ಮಹಲ್ ಕಟ್ಟದೇ ಇದ್ದಿದ್ದರೆ ದೇಶದಲ್ಲಿ ಲೀಟರ್ ಪೆಟ್ರೋಲ್ ಬೆಲೆ 40 ರೂಪಾಯಿ ಆಗಿರುತ್ತಾ ಇತ್ತು ಎಂದು ಹೈದರಾಬಾದ್ ಸಂಸದ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಓವೈಸಿ ವಾಗ್ದಾಳಿ ನಡೆಸಿದ್ದು, “ದೇಶದ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಹಣದುಬ್ಬರ ಹೆಚ್ಚುತ್ತಿದೆ. ಡೀಸೆಲ್ ಲೀಟರ್‌ಗೆ 102 ರೂಪಾಯಿ ಆಗಿದೆ. ಇದಕ್ಕೆಲ್ಲ ಔರಂಗಜೇಬ್ ಕಾರಣ, ಪ್ರಧಾನಿ ಅಲ್ಲ. ನಿರುದ್ಯೋಗಕ್ಕೆ ಚಕ್ರವರ್ತಿ ಅಕ್ಬರ್ ಕಾರಣ. ಪೆಟ್ರೋಲ್ ಲೀಟರ್‌ಗೆ 104 ರೂ.ಗೆ ಮಾರಾಟವಾಗುತ್ತಿದೆ. ಇದಕ್ಕೆ ತಾಜ್ ಮಹಲ್ ಕಟ್ಟಿದ ವ್ಯಕ್ತಿಯೇ ಕಾರಣ ಎಂದಿದ್ದಾರೆ.

 

ಅವರು ತಾಜ್ ಮಹಲ್ ಅನ್ನು ನಿರ್ಮಿಸದಿದ್ದರೆ, ಇಂದು ಪೆಟ್ರೋಲ್ ಅನ್ನು ಲೀಟರ್‌ಗೆ 40 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ತಾಜ್ ಮಹಲ್, ಕೆಂಪು ಕೋಟೆಯನ್ನು ನಿರ್ಮಿಸುವಲ್ಲಿ ತಪ್ಪು ಮಾಡಿದ್ದಾರೆ, ಅವರು ಹಣವನ್ನು ಉಳಿಸಿ 2014 ರಲ್ಲಿ ಮೋದಿಗೆ ಹಸ್ತಾಂತರಿಸಬೇಕಿತ್ತು. ಎಲ್ಲಾ ವಿಷಯಗಳಲ್ಲಿ ಅವರು (ಬಿಜೆಪಿ) ಮುಸ್ಲಿಮರನ್ನು ದೂಷಿಸುತ್ತಾರೆ.

ಭಾರತವನ್ನು ಆಳಿದವರು ಬರೀ ಮೊಘಲರೇ? ಅಶೋಕ್? ಚಂದ್ರಗುಪ್ತ ಮೌರ್ಯ? ಆದರೆ ಬಿಜೆಪಿಯವರಿಗೆ ಮೊಘಲರನ್ನು ಮಾತ್ರ ನೋಡಬಹುದು. ಅವರು ಮೊಘಲರನ್ನು ಒಂದು ಕಣ್ಣಿನಿಂದ ಮತ್ತು ಇನ್ನೊಂದು ಕಣ್ಣಿನಿಂದ ಪಾಕಿಸ್ತಾನವನ್ನು ನೋಡುತ್ತಾರೆ.” “ನಾವು ಭಾರತವನ್ನು ಪ್ರೀತಿಸುತ್ತೇವೆ. ನೀವು ಎಷ್ಟೇ ಘೋಷಣೆಗಳನ್ನು ಕೂಗಿದರೂ ನಾವು ಭಾರತವನ್ನು ತೊರೆಯುವುದಿಲ್ಲ. ನಾವು ಇಲ್ಲಿಯೇ ಇರುತ್ತೇವೆ, ನಾವು ಇಲ್ಲಿಯೇ ಸಾಯುತ್ತೇವೆ” ಎಂದು ಓವೈಸಿ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *