ಶೃಂಗೇರಿ ಶಾಸಕ ರಾಜೇಗೌಡ ವಿರುದ್ದ ಸಿಎಲ್ಪಿ ಸಭೆ ಬಳಿಕ ಬುಗಿಲೆದ್ದ ಆಕ್ರೋಶ..!

1 Min Read

ಕೋಲಾರ: ಕಾಂಗ್ರೆಸ್ ಶಾಸಕರು ತಮ್ಮ ಸರ್ಕಾರದ ವಿರುದ್ಧ, ತಮ್ಮ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಬುಧವಾರ ನಡೆದ ಸಿಎಲ್ಪಿ ಸಭೆಯಲ್ಲಿಯೇ ಗಲಾಟೆ ನಡೆದಿದೆ. ಸಿಎಲ್ಪಿ ಸಭೆಯಲ್ಲಿ ಗಲಾಟೆ ನಡೆದ ಬಳಿಕ ಶಾಸಕ ನಾರಾಯಣ ಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ನಮ್ಮ ನಾಯಕರು. ನಮ್ಮದೇನೆ ಸಮಸ್ಯೆ ಇದ್ದರು ಅವರ ಬಳಿಯೇ ಹೇಳಿಕೊಳ್ಳಬೇಕು. ಹೀಗಾಗಿ ಇರುವಂತಹ ಸಮಸ್ಯೆಗಳನ್ನ ಸಿಎಂ ಸಿದ್ದರಾಮಯ್ಯ ಅವರಿಗೆ ಕೊಡ್ತಾ ಇದ್ದೆ. ಕಠಾರಿ ಅವರು 55 ಶಾಸಕರು ವರ್ಗಾವಣೆ ಮಾಡಲು ಸಹಿ ಹಾಕಿ ಕೊಟ್ಟಿದ್ದರು, ವರ್ಗಾವಣೆ ಮಾಡಿರೋದಿಲ್ಲ. ಈ ಬಗ್ಗೆ ನಾನು ಶಾಸಕರನ್ನು ಒತ್ತಾಯ ಮಾಡುವಂತೆ ನನಗೆ ತಿಳಿಸಿದ್ದರು. ಅದಕ್ಕೆ ನಾನು ಒತ್ತಾಯ ಮಾಡಿದೆ. ಈ ಮಧ್ಯೆ ಸಿಎಲ್ಪಿ ಸಭೆಯಲ್ಲಿ ಗಲಾಟೆ ಆಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನ್ಯಾಯ ಕೊಡಿಸ್ತಾರೆ ಎಂಬ ನಂಬಿಕೆ ನನಗೆ ಇದೆ. ದಲಿತ ವಿರೋಧಿ ಆಗಿರುವ ಶೃಂಗೇರಿ ಶಾಸಕ ರಾಜೀವ್ ಗೌಡ ವಿರುದ್ಧ ನಾನು ಕೂಡ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸುತ್ತೇನೆ.

ನನ್ನ ಹಕ್ಕನ್ನ ಅವರು ಮೊಟಕುಗೊಳಿಸ್ತಾ ಇದ್ದಾರೆ. ಯಾಕೆ ನನ್ನ ಹಕ್ಕನ್ನ ಮೊಟಕುಗೊಳಿಸ್ತಾ ಇದ್ದಾರೆ ಅನ್ನೋದನ್ನ ತಿಳಿದುಕೊಂಡು ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸುತ್ತೇನೆ. ಇವತ್ತು ರೆವಿನ್ಯೂ ಯಾಕೆ ಬರ್ತಾ ಇಲ್ಲ. ಈ ರಾಜ್ಯದಲ್ಲಿ ಈ ರಾಜ್ಯದಲ್ಲಿ ರಿಜಿಸ್ಟ್ರೇಷನ್ ಆಗುವಾಗ ಏನೆಲ್ಲಾ ಸಮಸ್ಯೆಗಳು ಎದುರಾಗ್ತಿವೆ. ಕಾವೇರಿ ಎರಡು ಮಾಡಿದಾಗ ರೈತರಿಗೆ ಏನು ಸಮಸ್ಯೆ ಆಯ್ತು. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ಆದಾಯ ಕಡಿತವಾಗ್ತಾ ಇದೆ ಎಂಬುದನ್ನ ತಿಳಿಸಿದ್ದಾರೆ.

Share This Article