ಹಳೆಯ ವಿದ್ಯಾರ್ಥಿಗಳಿಂದ ನಮ್ಮ ಶಾಲೆಗೆ ನಮ್ಮ ಗೌರವ 25 ನೇ ವರ್ಷದ ಗುರು ವಂದನಾ ಕಾರ್ಯಕ್ರಮ

suddionenews
1 Min Read

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಎ.ಭೀಮಪ್ಪನಾಯಕ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಮ್ಮ ಶಾಲೆಗೆ ನಮ್ಮ ಗೌರವ 25 ನೇ ವರ್ಷದ ಗುರು ವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

1996-97 ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ನಿವೃತ್ತ ಶಿಕ್ಷಕರುಗಳಾದ ಆರ್.ವಿ.ಮಾರುತೇಶರೆಡ್ಡಿ, ಲಿಂಗಪ್ಪ ಎಂ.ಜಿ. ಮಂಜಪ್ಪ ಎಸ್.ಕೆ. ಶ್ರೀಮತಿ ನೀಲಮ್ಮ ಎನ್.ಬಿ. ಮುಖ್ಯೋಪಾಧ್ಯಾಯರಾದ ಮಂಜಪ್ಪ ಎಸ್.ಕೆ. ಹನುಮಂತರೆಡ್ಡಿ ಹೆಚ್. ರೇಖಾ ಬಿ. ಶಿಕ್ಷಕ ಶಾಂತಪ್ಪ ಎಂ.ಇವರುಗಳನ್ನು ಸನ್ಮಾನಿಸಲಾಯಿತು.

ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿತ್ರನಾಯಕ ವಿದ್ಯಾಸಂಸ್ಥೆ ಖಜಾಂಚಿ ಡಾ.ಸುನೀಲ್‍ಕುಮಾರ್ ಡಿ.ಆರ್. ನಗರಸಭೆ ಸದಸ್ಯ ದೀಪಕ್ ಜೆ.ಎಸ್.ಇವರುಗಳನ್ನು ಗೌರವಿಸಲಾಯಿತು.

ಎ.ಭೀಮಪ್ಪ ನಾಯಕ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಗುರುವಂದನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಜಗದೀಶ್ ಹೆಚ್. ನರೇಂದ್ರಕುಮಾರ್ ಟಿ. ಲೋಕೇಶ್ ಹೆಚ್. ಆಶಾರಾಣಿ, ನೀತಾ, ಜರೀನಾ ಭಿ, ಇನ್ನು ಅನೇಕ ವಿದ್ಯಾರ್ಥಿಗಳು ಗುರುವಂದನಾ ಕಾರ್ಯಕ್ರಮದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *