Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮ ಊರು ನಮ್ಮ ಹೆಮ್ಮೆ | ಚಿತ್ರದುರ್ಗದ ಕರುವರ್ತಿ / ಕರಿವರ್ತಿ ಈಶ್ವರ ಮಂದಿರದ ಪರಿಚಯ

---Advertisement---

ವಿಶೇಷ ಲೇಖನ :
ಡಾ.ಕೆ.ವಿ. ಸಂತೋಷ್
ಹೊಳಲ್ಕೆರೆ
ಚಿತ್ರದುರ್ಗ ಜಿಲ್ಲೆ.
ಮೊ : 93424 66936

 

ಚಿತ್ರದುರ್ಗ ನಗರದ ಚಿತ್ರದುರ್ಗ ಕೋಟೆಯ ಆಗ್ನೇಯ ದಿಕ್ಕಿನಲ್ಲಿ ಕೋಟೆಯ (ಕಾಮನಬಾಗಿಲು)ಮುಖ್ಯ ದ್ವಾರದಿಂದ ದಕ್ಷಿಣಕ್ಕೆ ಇರುವ ಕರುವರ್ತಿ ಈಶ್ವರ ದೇವಾಲಯವನ್ನು 17-18 ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಪೂರ್ವಾಭಿಮುಖವಾಗಿದೆ.ಉತ್ತಮ ಸಂರಕ್ಷಣಾ ಸ್ಥಿತಿಯಲ್ಲಿರುವ ಈ ದೇಗುಲವನ್ನು ದೇವಾಲಯವನ್ನು ತಲುಪಲು ಚಿತ್ರದುರ್ಗದ ಕೋಟೆಯಿಂದ ಮುಂದೆ ಶ್ರೀರಾಮ ದೇವರ ಒಡ್ಡು ಮಾರ್ಗದಲ್ಲಿ ತೆರಳಬೇಕು. ಆಂಜನೇಯ ಮಂದಿರವನ್ನು ದಾಟಿ ಸಿಗುವ ಸಣ್ಣ ಅಗಸೆ ಬಾಗಿಲು ಮೂಲಕ ಸಾಗಿದರೆ ಬಲಭಾಗದಲ್ಲಿ ಈ ಮಂದಿರ ಸಿಗುತ್ತದೆ.

 

ಸುತ್ತಲೂ ಕುರುಚಲು ಗಿಡಗಳು ಬೆಳೆದಿದ್ದು ಅದರ ನಡುವಿನ ಕಾಂಕ್ರೀಟ್ ದಾರಿಯಲ್ಲಿ ಸಾಗಬೇಕು.ಪ್ರತಿ ಸೋಮವಾರ ಇಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ದೇವಾಲಯದ ಮುಂಭಾಗದಲ್ಲಿ ನಿಂತರೆ ಸುತ್ತಮುತ್ತಲ ಪ್ರದೇಶವನ್ನು ವೀಕ್ಷಿಸಬಹುದಾಗಿದೆ.ಗರ್ಭಗೃಹ ,ಸಭಾಮಂಟಪ ಹಾಗೂ ದೇಗುಲಕ್ಕೆ ಅಂಟಿಕೊಂಡಂತೆ ಮುಂಭಾಗದಲ್ಲಿ ಸುಂದರವಾದ ನೀರಿನ ಕೊಳವನ್ನು ಹೊಂದಿರುವ ದೇವಾಲಯವಿದು.

 

ಇದರ ಮುಖ್ಯ ಶಿವಲಿಂಗ,ಕಂಬಗಳು ಮತ್ತು ಬಾವಿ ಅಥವಾ ವರ್ತಿಗಳನ್ನು ಕಪ್ಪುಶಿಲೆಯನ್ನು ಬಳಸಿ ನಿರ್ಮಿಸಿರುವುದರಿಂದ ಈ ದೇವಾಲಯವನ್ನು ಕರಿವರ್ತಿ ಈಶ್ವರ ಎಂದು ಕರೆಯುತ್ತಾರೆ. ಗರ್ಭಗೃಹದಲ್ಲಿ ಎರಡು ಅಡಿಗಳೆತ್ತರದ ಕಪ್ಪುಶಿಲೆಯಲ್ಲಿ ನಯವಾಗಿ ಕಡೆಯಲಾದ ಪ್ರತಿಷ್ಠಾಪನಾ ಶಿವಲಿಂಗವಿದೆ.ಇವುಗಳನ್ನು ಇತ್ತೀಚಿಗೆ ಹೊಸದಾಗಿ ಪ್ರತಿಷ್ಠಾಪಿಸಿರುವರು .ಹಳೆಯ ಮೂರ್ತಿಗಳನ್ನು ಮುಂಭಾಗದ ಕೊಳದಲ್ಲಿ ಹಾಕಲಾಗಿದ್ದು, ಅವುಗಳನ್ನು ಹೂಳೆತ್ತುವ ಸಂದರ್ಭದಲ್ಲಿ ಹೊರಗೆ ತೆಗೆಯಲಾಗಿದೆ .ಸಭಾಮಂಟಪದಲ್ಲಿ ಅದೇ ಕಲ್ಲಿನ ನಂದಿಯಿದೆ.ನಂದಿಯನ್ನು ಗಂಟೆಸರಗಳಿಂದ ಅಲಂಕರಿಸಿರುವರು.ಗರ್ಭಗೃಹದ ಬಾಗಿಲವಾಡದಲ್ಲಿ ಶೈವ ದ್ವಾರಪಾಲಕರಿದ್ದು,ತ್ರಿಶೂಲ, ಡಮರು, ಗದೆ ಹಾಗೂ ಅಭಯ ಮುದ್ರೆಯಲ್ಲಿ ನಿಂತಿದ್ದಾರೆ.ದ್ವಾರ ಬಂಧದಲ್ಲಿ ಗಜಲಕ್ಷ್ಮಿ ಶಿಲ್ಪವಿದೆ. ಬಾಗಿಲುವಾಡವನ್ನು ಹೂವುಗಳಿಂದ ಅಲಂಕರಿಸಲಾಗಿದೆ.ಸಭಾಮಂಟಪದಲ್ಲಿ ಕಪ್ಪು ಶಿಲೆಯಲ್ಲಿ ಕಡೆಯಲಾದ ಆರು ಕಂಬಗಳಿದ್ದು,ಈ ಕಂಬಗಳನ್ನು ಬಹುಮುಖಗಳಲ್ಲಿ ಕಡೆದಿರುವರು.

 

 

ಅವುಗಳಲ್ಲಿ ಗೋಪಾಲಕೃಷ್ಣ ,ಶಿವಪಾರ್ವತಿ, ಕಾಳಿಂಗಮರ್ಧನ ,ಕೃಷ್ಣ ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ ,ಪರಶುರಾಮ, ಪದ್ಮ ,ಆಂಜನೇಯ ,ಮಹಿಷಮರ್ದಿನಿ ,ರತಿ- ಮನ್ಮಥ ಗಂಡಭೇರುಂಡ ,ನಾಗಬಂಧ, ಹಿರಣ್ಯಕಶಿಪುವನ್ನು ಸಂಹರಿಸುತ್ತಿರುವ ನರಸಿಂಹ ಮೊದಲಾದವು ಮುಖ್ಯವಾಗಿವೆ. ಮೇಲ್ಭಾಗದ ಬೋದಿಗೆಯನ್ನು ಬಾಳೆಯ ಮೊಗ್ಗಿನಾಕಾರದಲ್ಲಿ ಅಲಂಕರಿಸಿರುವರು.ಸಭಾಮಂಟಪದ ಮೇಲ್ಭಾಗದ ಭುವನೇಶ್ವರಿಯನ್ನು ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕಡೆಯಲಾಗಿದ್ದು,ಇದು ಹೊಯ್ಸಳ ದೇಗುಲಗಳ ಭುವನೇಶ್ವರಿಯನ್ನು ನೆನಪಿಸುವಂತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...