ಬೆಂಗಳೂರು: ಇತ್ತಿಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಚ್ಚಿದ ಕಚೇರಿಯ ಬಾಗಿಲನ್ನು ತೆರೆದಿದ್ದರು. ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದರು. ಈ ಬಗ್ಗೆ ನಿರಂಜನಾನಂದಪುರಿ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೇತನಹಳ್ಳಿಯಲ್ಲಿ ನಡೆದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುರುಬ ಸಮುದಾಯದ ಸಿಎಂ ಆಗಬೇಕೆಂಬ ಕೂಗು ಬರ್ತಾನೆ ಇರುತ್ತೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನೋದು ವಿಶೇಷ. ಅಲ್ಲ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಇದೆ ನಮ್ಮ ಸಮುದಾಯದ ಸಿದ್ದರಾಮಯ್ಯ ಮೌಲ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧದಲ್ಲಿ ಮುಟ್ಟಿದ ಬಾಗಿಲು ತೆರೆಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಮೌಲ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸರ್ಕಾರದಿಂದ ನಮ್ಮ ಶಾಖ ಮಠಕ್ಕೆ ಯಾವುದೇ ಅನುದಾನ ಬೇಡ. ಸಮಾಜದ ಜನರ ಜೋಳಿಗೆಯಿಂದಲೇ ಮಠ ನಿರ್ಮಾಣವಾಗಬೇಕು. ಭೂಮಿ ಪೂಜೆ ಕಾರ್ಯಕ್ರಮದಲ್ಲಿ ನಿರಂಜನಾಂದ ಶ್ರೀ ಹೇಳಿಕೆ ನೀಡಿದ್ದಾರೆ.