ಧಾರವಾಡ : ಖಾಲಿ ಇರುವ ಉದ್ಯೋಗಗಳನ್ನ ಭರ್ತಿ ಮಾಡುವಂತೆ ಒತ್ತಾಯಿಸಿ ಸಾವಿರಾರು ಅಭ್ಯರ್ಥಿಗಳು ಹೋರಾಟಕ್ಕೆ ಇಳಿದಿದ್ದಾರೆ. ಇವರ ಹೋರಾಟಕ್ಕೆ ಬಿಜೆಪಿ ನಾಯಕರು ಸಾಥ್ ನೀಡಿದ್ದಾರೆ. ಅದರಲ್ಲೂ ಆರ್.ಅಶೋಕ್ ಅವರು ಧಾರವಾಡಕ್ಕೆ ಹೋಗಿ ಧರಣಿ ನಿರತ ಅಭ್ಯರ್ಥಿಗಳ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಬಿಜೆಪಿ ನಾಯಕರ ಈ ನಡೆಗೆ ಸಚಿವ ಸಂತೋಷ್ ಲಾಡ್ ಗರಂ ಆಗಿದ್ದಾರೆ.
ನಮ್ಮ ಸರ್ಕಾರ 40 ಸಾವಿರ ಹುದ್ದೆಗಳನ್ನ ಭರ್ತಿ ಮಾಡಿದೆ. 50 ಸಾವಿರಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ಮುಂದಾಗಿದ್ದೇವೆ. ಇದು ಗೊತ್ತಾಗಿಯೇ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಬಿಜೆಪಿ ಮುಂದಾಗಿದೆ ಅಂತ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸರ್ಕಾರದ ಆದೇಶದಂತೆ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಮಾಡಬೇಕು. ಜಾಬ್ ನೀಡುವವರಿಗೆ ಒಂದು ಪ್ಲಾಟ್ ಫಾರ್ಮ್ ನ ಸರ್ಕಾರ ಅವಕಾಶ ಮಾಡಿಕೊಡ್ತಾ ಇದೆ. ಹೀಗಾಗಿನೆ ಜಾಬ್ ಮೇಳಗಳು ನಡೀತಾ ಇದೆ. ಬಿಜೆಪಿಯವರು ಮೊದಲು ಪ್ರಧಾನ ಮಂತ್ರಿಗಳ ವಿರುದ್ಧ ಮಾಡಬೇಕು. ವರ್ಷಕ್ಕೆ ಎರಡು ಕೋಟಿ ಕೆಲಸ ಕೊಡ್ತೀವಿ ಅಂದಿದ್ದರು. ಇಲ್ಲಿರುವಂತ ಯುವಕರು ಅದನ್ನು ಕೇಳಬೇಕು. ಬಿಜೆಪಿಯವರು ಕೂಡ ಪ್ರಧಾನಿಯವರನ್ನ ಕೇಳಬೇಕು ಎಂದಿದ್ದಾರೆ.
ಇನ್ನು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಸ್ತೆಯಲ್ಲೆಲ್ಲಾ ಟೈಯರ್ ಸುಟ್ಟು ಆಕ್ರೋಶ ಹೊರ ಹಾಕಿದ್ದಾರೆ. ಸಾಕಷ್ಟು ವರ್ಷಗಳಿಂದ ಜವಾಬ್ದಾರಿಗಳ ನಡುವೆಯೂ ಅದೆಷ್ಟೋ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಕ್ಕಾಗಿ ಕಷ್ಟಪಟ್ಟು ಓದುತ್ತಿದ್ದಾರೆ. ಕೆಲಸಕ್ಕೆ ನೇಮಕಾತಿಯ ಅರ್ಜಿಯನ್ನೆ ಕರೆಯದೆ ಹೋದರೆ ಅವರ ಓದಿಗೆ ಎಲ್ಲಿಯ ಸಾರ್ಥಕತೆ. ಹೀಗಾಗಿ ಅವರ ತಾಳ್ಮೆಯ ಕಟ್ಟೆಯೂ ಒಡೆದಿದ್ದು, ಇಂದು ಹೋರಾಟಕ್ಕೆ ಇಳಿದಿದ್ದಾರೆ.



