ಮಂಗಳೂರು: ರಾಮಮಂದಿರದ ಕನಸು ಎಲ್ಲರಿಗೂ ಇದೆ. ಯಾವಾಗ ಉದ್ಘಾಟನೆಯಾಗುತ್ತೆ, ಯಾವಾಗ ದರ್ಶನ ಸಿಗಲಿದೆ ಎಂದು ಇಡೀ ದೇಶದ ಜನತೆ ಕಾಯುತ್ತಿದ್ದಾರೆ. ಈ ಮಧ್ಯೆ ಪೇಜಾವರ ಶ್ರೀಗಳು ರಾಮಮಂದಿರದ ಬಗ್ಗೆ ಮಾತನಾಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ, ಅವರು ಮಕರ ಸಂಕ್ರಾಂತಿ ಹಬ್ಬ ದ ಬಳಿಕ ರಾಮ ಮಂದಿರ ಉದ್ಘಾಟನೆಯ ದಿನಾಂಕ ತಿಳಿಯಲಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದಲ್ಲಿ ಯಾವುದೇ ಸೇವೆಗಳು ನಡೆಯುವುದಿಲ್ಲ. ರಾಮನ ಹೆಸರಲ್ಲಿ ಭಕ್ತರು ಮಾಡುವ ದಾನಗಳೇ ಸೇವೆಗಳಾಗಿರುತ್ತವೆ.
ಅಯೋಧ್ಯೆಯಲ್ಲಿ ರಾಮನ ಮುಂದೆ ದಾನವನ್ನು ಅರ್ಪಿಸೋಣ. ಬಡವರಿಗೆ ಉಚಿತ ಚಿಕಿತ್ಸೆ, ಅರ್ಹ ವಿದ್ಯಾರ್ಥಿಗೆ ಚಿಕಿತ್ಸೆ, ಗೋ ದತ್ತು ಪಡೆಯುವ ಮೂಲಕ ರಾಮಸೇವೆ ಮಾಡೋಣ. ಈ ಮೂಲಕ ರಾಮ ರಾಜ್ಯದ ಕನಸನ್ನು ನನಸು ಮಾಡೋಣ ಅಂತಾ ಕರೆ ನೀಡಿದರು. ನಮ್ಮ ಕನಸು ರಾಮಮಂದಿರ ಅಲ್ಲ, ರಾಮ ರಾಜ್ಯದ ಕನಸು ಅಂತಾ ಹೇಳಿದರು.