ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಯಿ ಹೇಳಿದರು.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅತಿ ಹೆಚ್ಚು ಮತಗಳಿಂದ ನಮ್ಮ ಅಭ್ಯರ್ಥಿಗಳು ಆಯ್ಕೆ ಆಗ್ತಾರೆ,ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗಿದೆ. ಹೀಗಾಗಿ ನಮ್ಮ ಅಭ್ಯರ್ಥಿಗಳು ವಿಜಯಶಾಲಿ ಆಗುವ ಸಂಪೂರ್ಣ ವಿಶ್ವಾಸ ಇದೆ ಎಂದು ಬಸವರಾಜ್ ಬೊಮ್ಮಯಿ ಹೇಳಿದರು.
ಇನ್ನೂ ಮೂರನೇ ಅಲೆಯ ಆತಂಕ ವಿಚಾರವಾಗಿ ಮಾತನಾಡಿದ ಅವರು, ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪರಿಣಿತರ ಸಂಪರ್ಕದಲ್ಲಿ ನಾವಿದ್ದೇವೆ. ಪರಿಣಿತರು ಎಲ್ಲ ಗಮನಿಸ್ತಿದ್ದಾರೆ,ಬೇರೆ ದೇಶಗಳಲ್ಲಿ ಯಾವ ಪರಿಸ್ಥಿತಿ ಇದೆ ಅಂತ ಗಮನಿಸುತ್ತಿದ್ದಾರೆ. ಪರಿಣಿತರ ತಜ್ಞರ ಪ್ರಕಾರ ಸರ್ಕಾರ ನಡೆದುಕೊಳ್ಳಲಿದೆ ಎಂದರು.
ಇನ್ನೂ ಮುಂದೆ ಪೊಲೀಸ್ ಕವಾಯತು ಕನ್ನಡದಲ್ಲಿ ಎಂದು ಸಿಎಂ ಘೋಷಿಸಿದರು. ಕವಾಯತಿನಲ್ಲಿರುವ ಆದೇಶಗಳನ್ನು ಇನ್ಮುಂದೆ ಕನ್ನಡದಲ್ಲಿ ಕೊಡಲಾಗುತ್ತೆ ಎಂದರು.