Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ವಿಶ್ವಕರ್ಮ ರಾಜ್ಯ ಸಮಾವೇಶ ಆಯೋಜನೆ : ಬಾಬು ಪತ್ತಾರ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ: ಆಳುವ ಸರ್ಕಾರಗಳಿಗೆ ನಮ್ಮ ಜನಾಂಗದ ಬಲ ತೋರಿಸಬೇಕಾಗಿರುವುದರಿಂದ ವಿಶ್ವಕರ್ಮ ರಾಜ್ಯ ಸಮಾವೇಶ ಚಿತ್ರದುರ್ಗದಲ್ಲಿ ನಡೆಸಲೇಬೇಕು ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮದ ನಿಕಟಪೂರ್ವ ಅಧ್ಯಕ್ಷ ಬಾಬು ಪತ್ತಾರ್ ತಿಳಿಸಿದರು.

ನವೆಂಬರ್‌ನಲ್ಲಿ ಚಿತ್ರದುರ್ಗದಲ್ಲಿ ವಿಶ್ವಕರ್ಮ ಸಮಾವೇಶ ಆಚರಿಸುವ ಅಂಗವಾಗಿ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಸಮಾವೇಶ ಆಗಿರುವುದರಿಂದ ಚಿತ್ರದುರ್ಗದಲ್ಲಿ ರಾಜ್ಯ ವಿಶ್ವಕರ್ಮ ಸಮಾವೇಶವನ್ನು ಅದ್ದೂರಿಯಾಗಿ ಆಚರಿಸಬೇಕಾಗಿದೆ. ಯಾವ ಸರ್ಕಾರಗಳು ವಿಶ್ವಕರ್ಮರನ್ನು ಗುರುತಿಸುತ್ತಿಲ್ಲ. ಅದಕ್ಕಾಗಿ ನಮ್ಮ ಜನಸಂಖ್ಯೆಯ ಬಲವನ್ನು ಸರ್ಕಾರಕ್ಕೆ ಪ್ರದರ್ಶಿಸುವುದರ ಜೊತೆಗೆ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ವಿಶ್ವಕರ್ಮ ಸಮಾವೇಶವನ್ನು ನಡೆಸಬೇಕು. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮಾವೇಶಕ್ಕೆ ಈಗಿನಿಂದಲೇ ತಯಾರಿಯಾಗಬೇಕು. ಮೊದಲು ಕಮಿಟಿಗಳನ್ನು ರಚಿಸಿ ಒಬ್ಬೊರಿಗೆ ಒಂದೊಂದು ಜವಾಬ್ದಾರಿ ಕೊಡಿ. ಕೇಂದ್ರದಲ್ಲಿಯೂ ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ ಸಮಾವೇಶದಲ್ಲಿ ಒತ್ತಡ ಹಾಕೋಣ. ಬೆಂಗಳೂರಿನಲ್ಲಿ ವಿಶ್ವಕರ್ಮ ಭವನ ನಿರ್ಮಾಣವಾಗಬೇಕು. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಿದ್ಯಾರ್ಥಿ ಭವನ, ಹಾಸ್ಟೆಲ್ ಪ್ರಾರಂಭಿಸಬೇಕು. ನಮ್ಮ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗಿರುವುದರಿಂದ ತರಬೇತಿ ಕೇಂದ್ರದ ಅಗತ್ಯವಿದೆ ಎಂದು ಹೇಳಿದರು.

ವಿಶ್ವಕರ್ಮ ಸಮಾಜದವರು ಅಹಂ, ಭಿನ್ನಾಭಿಪ್ರಾಯ ಬಿಟ್ಟು ಒಟ್ಟಿಗೆ ಸೇರಬೇಕು. ಸರ್ಕಾರದಿಂದ ನಮಗೆ ಸಿಗಬೇಕಾದ ನ್ಯಾಯಯುತವಾದ ಹಕ್ಕನ್ನು ಪಡೆಯುವುದಕ್ಕಾಗಿ ಸಮಾವೇಶ, ಸಭೆಗಳು ನಡೆಯಬೇಕು ಎಂದು ವಿಶ್ವಕರ್ಮ ಜನಾಂಗಕ್ಕೆ ಕರೆ ನೀಡಿದರು.

ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ಬಿ.ಉಮೇಶ್ ಮಾತನಾಡಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾದರೆ ವಿಶ್ವಕರ್ಮ ಜನಾಂಗ ರಾಜಕೀಯವಾಗಿ ಮುಂದೆ ಬರಬೇಕು. ಐದು ಕಸುಬುಗಳನ್ನು ಮಾಡುವವರು ಯಾರಾದರೂ ಇದ್ದರೆ ಅದು ವಿಶ್ವಕರ್ಮರು ಮಾತ್ರ. ಪಂಗಡ, ಉಪ ಪಂಗಡಗಳನ್ನು ಆಚಾರ-ವಿಚಾರಗಳಿಗೆ ಮಾತ್ರ ಇಟ್ಟುಕೊಳ್ಳಿ. ಉಳಿದಂತೆ ಜನಾಂಗದ ಪ್ರಶ್ನೆ ಬಂದಾಗ ವಿಶ್ವಕರ್ಮರು ಒಂದಾಗಿ ಸೇರಲೇಬೇಕು. ಚಿತ್ರದುರ್ಗದಲ್ಲಿ ಐತಿಹಾಸಿಕವಾಗಿ ಸಮಾವೇಶ ಆಗಬೇಕಾಗಿರುವುದರಿಂದ ಸಣ್ಣಪುಟ್ಟ ಭಿನ್ನಾಭಿಪ್ರಾಯವನ್ನು ಬಿಟ್ಟು ರಾಜ್ಯಕ್ಕೆ ಒಗ್ಗಟ್ಟಿನ ಸಂದೇಶ ರವಾನಿಸಬೇಕಿದೆ ಎಂದು ಮನವಿ ಮಾಡಿದರು.

ವಿಶ್ವಕರ್ಮ ಮಹಾಮಂಡಲ ರಾಜ್ಯಾಧ್ಯಕ್ಷ ನಾಗರಾಜಚಾರ್ ಮಾತನಾಡುತ್ತ ಜನಾಂಗದ ಪ್ರತಿಯೊಬ್ಬರು ಕೈಜೋಡಿಸಿದಾಗ ಮಾತ್ರ ವಿಶ್ವಕರ್ಮ ಸಮಾವೇಶ ಯಶಸ್ವಿಯಾಗಿ ನಡೆಯುತ್ತದೆ. ಸಮಿತಿಗಳನ್ನು ರಚಿಸಿ ಜಿಲ್ಲೆಯಲ್ಲಿರುವ ಪ್ರತಿ ವಿಶ್ವಕರ್ಮರನ್ನು ಸಮಾವೇಶಕ್ಕೆ ಕರೆತರುವ ಕೆಲಸವಾಗಬೇಕು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾಗಿರುವುದರಿಂದ ವಿಶ್ವಕರ್ಮ ಜನಾಂಗ ಒಗ್ಗಟ್ಟಾಗಬೇಕು ಎಂದು ವಿನಂತಿಸಿದರು.

ನಿವೃತ್ತ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಲ್.ನಾರಾಯಣಚಾರ್ ಮಾತನಾಡಿ ಪಕ್ಷ ಬೇಧ ಮರೆತು ಎಲ್ಲಾ ನಾಯಕರುಗಳನ್ನು ಸಮಾವೇಶಕ್ಕೆ ಆಹ್ವಾನಿಸುವ ಅಗತ್ಯವಿದೆ. ವಿಜೃಂಭಣೆಯಿಂದ ಸಮಾವೇಶ ಮಾಡಿದರೆ ಸಾಲದು ಕಷ್ಟದಲ್ಲಿರುವ ವಿಶ್ವಕರ್ಮ ಜನಾಂಗವನ್ನು ಕೈಹಿಡಿದು ಮೇಲಕ್ಕೆತ್ತುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

ಚಳ್ಳಕೆರೆಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ವಿಶ್ವಕರ್ಮ ಜನಾಂಗಕ್ಕೆ ಕೊಡಿಸಿದ ನಿವೇಶನದಲ್ಲಿ ಈಗ ಬೃಹಧಾಕಾರವಾದ ಕಲ್ಯಾಣ ಮಂಟಪವಾಗಿದೆ. ಅದೇ ರೀತಿ ಚಿತ್ರದುರ್ಗ, ಹಿರಿಯೂರಿನಲ್ಲಿ ಕೆಲಸ ಮಾಡುವಾಗಲೂ ವಿಶ್ವಕರ್ಮರಿಗೆ ಅನೇಕ ರೀತಿಯ ನೆರವನ್ನು ಕಾನೂನು ಬದ್ದವಾಗಿ ಕಲ್ಪಿಸಿದ್ದೇನೆ ಎಂದು ಹೇಳಿದರು.
ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ವಿಶ್ವಕರ್ಮ ಜಯಂತಿ ಘೋಷಿಸಿ ಅಭಿವೃದ್ದಿ ನಿಗಮ ರಚಿಸಿದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಶಂಕರಾಚಾರ್ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ರುದ್ರಾಚಾರ್, ಅಖಿಲ ಭಾರತ ವಿಶ್ವಕರ್ಮ ಪರಿಷತ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ವಿಶ್ವಕರ್ಮ ಸೇವಾ ಸಮಿತಿ ಅಧ್ಯಕ್ಷ ಆರ್.ಮಧುಸೂದನ್, ವಿಶ್ವಕರ್ಮ ಸಮಾಜ ನೆಲಮಂಗಲ ತಾಲ್ಲೂಕು ಅಧ್ಯಕ್ಷ ಎ.ಕೃಷ್ಣಪ್ಪ,
ವಿಶ್ವಕರ್ಮ ಮಹಾಮಂಡಲ ನಿರ್ದೇಶಕ ಹನುಮಂತಾಚಾರ್, ಮಂಡ್ಯ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಬಿ.ವೆಂಕಟೇಶ್, ವಿಶ್ವಕರ್ಮ ಸಮಾಜದ ಮುಖಂಡರುಗಳಾದ ಗಂಗಾಧರಾಚಾರ್, ಜಗದೀಶಾಚಾರ್, ವೆಂಕಟೇಶಾಚಾರ್, ಮೌನೇಶ್ವರಚಾರ್, ಬಿ.ನಟರಾಜಚಾರ್, ಕಾರ್ಯಕಾರಿ ಮಂಡಳಿ ಅಧ್ಯಕ್ಷ ಎಂ.ಶಂಕರಮೂರ್ತಿ ವಿಶ್ವಕರ್ಮ, ವಿಶ್ವಕರ್ಮ ಪರಿಷತ್ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಸೇರಿದಂತೆ ವಿಶ್ವಕರ್ಮ ಜನಾಂಗದ ಅನೇಕರು ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಾಹಿತಿ ಬಿ.ಎಲ್.ವೇಣು ನಿವಾಸಕ್ಕೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಭೇಟಿ

ಸುದ್ದಿಒನ್, ಚಿತ್ರದುರ್ಗ, ಮೇ. 02 :  ಖ್ಯಾತ ಸಾಹಿತಿ, ಚಿಂತಕ ಬಿ.ಎಲ್.ವೇಣು ಅವರ ನಿವಾಸಕ್ಕೆ ಸ್ಥಳೀಯ ಶಾಸಕ ಕೆ.ಸಿ.ವೀರೆಂದ್ರ ಪಪ್ಪಿ ಅವರು ಭೇಟಿ ಮಾಡಿ, ಆಶೀರ್ವಾದ ಪಡೆದು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಲಹೆಗಳನ್ನು ಪಡೆದರು.

ಹೆಚ್ಚುತ್ತಿರುವ ಬಿಸಿಲ ಝಳ : ಸಾರ್ವಜನಿಕರು ಅನುಸರಿಸಬೇಕಾದ ಸರಳ ಉಪಾಯಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ಎಸ್.ನಾಗಸಮುದ್ರ

ಚಿತ್ರದುರ್ಗ. ಮೇ.02: ರಾಜ್ಯಾದ್ಯಂತ ಬಿಸಿಲಬೇಗೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಉಷ್ಣ ಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಝಳವು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ

ಕಾರ್ಮಿಕರು ಕೆಲಸದ ಜೊತೆ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು : ನ್ಯಾಯಾಧೀಶೆ ಬಿ.ಗೀತ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 02 : ಅನೇಕ ಸೌಲಭ್ಯಗಳಿಂದ ವಂಚಿತರಾಗಿರುವ ಅಸಂಘಟಿತ ಕಾರ್ಮಿಕರಿಗೆ ಹಕ್ಕುಗಳ ಕುರಿತು ಕಾನೂನು ಜಾಗೃತಿ

error: Content is protected !!