ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 13 : ರಸ್ತೆ ಮಾರ್ಗ ಬಿಟ್ಟು ರೈಲಿನ ಮೂಲಕ ಅದಿರು ಸಾಗಾಟ ನಡೆಸಿದರೆ ಸ್ಥಳೀಯ ಬೆಳವಣಿಗೆ ತೊಂದರೆಯಾಗುವುದಿಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ಅವರು ಇಂದು ತಾಲ್ಲೂಕಿನ ಭೀಮಸಮುದ್ರದ ವಿ. ಪಾಳ್ಯಕ್ಕೆ ಭೇಟಿ ನೀಡಿ ಮಾತನಾಡಿದರು. ಭೀಮಸಮುದ್ರ ಸುತ್ತಮುತ್ತಲಿನಲ್ಲಿ ಗಣಿಗಾರಿಕೆ ಕಂಪನಿಗಳ 100 ಲಾರಿಗಳು ಓಡಾಡುತ್ತವೆ. ಇಲ್ಲಿನ ರಸ್ತೆಗಳು ಹಾಳಾಗಿರುವುದು ಯಾರೂ ಗಮನ ಹರಿಸುತ್ತಿಲ್ಲ. ನನಗಿರುವ ಮಾಹಿತಿ ಪ್ರಕಾರ ಈ ರಸ್ತೆಯಲ್ಲಿ ಸುಮಾರು 100 – 150 ಜನ ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದಿದ್ದಾರೆ. ಮತ್ತು ವಿ. ಪಾಳ್ಯ ನಲ್ಲಿ ಕಟ್ಟೆ ಮಳಲಿ ಈ ಗ್ರಾಮಗಳಿಗೆ ರಾತ್ರಿ 108 ಆಂಬುಲೆನ್ಸ್ ಬರುವುದಿಲ್ಲ. ರಾತ್ರಿ ಯಾರಿಗಾದರೂ ಗರ್ಭಿಣಿಯರಿಗೆ ಹಾಗೂ ವಯಸ್ಕರಿಗೆ ಉಸಿರಾಟ ತೊಂದರೆ ಆದರೆ ಸಹಾಯಕ್ಕೆ ಯಾರೊಬ್ಬರೂ ಬರುವುದಿಲ್ಲ ಎಂದು ತಿಳಿಸಿದ್ದಾರೆ ಇಂತಹ ಸಮಸ್ಯೆ ಇದ್ದರೂ ಕೂಡ ರಸ್ತೆ ರಿಪೇರಿ ಮಾಡದಿರುವುದು ವಿಷಾದಕರ ಸಂಗತಿ.
ಸಿಎಸ್ಆರ್ ಫಂಡ್ ಅಡಿಯಲ್ಲಿ ರಸ್ತೆ ರಿಪೇರಿ ಹೈಟೆಕ್ ಆಸ್ಪತ್ರೆ ಸ್ಥಳೀಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸದ ಶಾಲೆ, ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬಹುದ ಎಂದರು.
ಇಲ್ಲಿನ ಸ್ಥಳೀಯ ಬೆಳೆಗಳಾದ ತೆಂಗು ಅಡಿಕೆ , ಮೆಕ್ಕೆಜೋಳ ಈ ಬೆಳೆಗಳಿಗೆ ಧೂಳು ಆವರಿಸಿ ಬೆಳೆ ನಾಶವಾಗಿದ್ದನ್ನು ಗಮನಿಸಿದ್ದೇನೆ. ಆದರೆ ಸ್ಥಳೀಯ ರೈತ ಸಂಘದ ಮುಖಂಡರುಗಳು ಇಂದು ಇಲ್ಲಿಗೆ ಕರೆಸಿ ಇದನ್ನು ವೀಕ್ಷಣೆ ಮಾಡಲು ಸಹಕರಿಸಿದ್ದಾರೆ.
ಅಡಿಕೆ ಬೆಂಬಲ ಕೆಂಪು ಸಂಸ್ಥೆಯು ಇದರ ಬಗ್ಗೆ ಸಾಕಷ್ಟು ಗಮನ ಹರಿಸುತ್ತಿದೆ ಆದರೆ ನಾನು ಕೂಡ ಶಾಸಕಾಂಗ ಪಕ್ಷದಲ್ಲಿ ಮಾತನಾಡುತ್ತೇನೆ. ಅಡಿಕೆ ತೆಂಗು ಹಾಗೂ ಮೆಕ್ಕೆಜೋಳ ಈರುಳ್ಳಿ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಹಾಗೆಯೇ ಬೆಳೆ ವಿಮೆ ಕೂಡ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷರಾದ ಭೂತಯ್ಯ ಮಾತನಾಡಿ ಈ ತಿಂಗಳ 22ರಂದು ಭೀಮಸಮುದ್ರಕ್ಕೆ ಹಿರೇಮಠ್ ಹಾಗೂ ದರ್ಶನ್ ಪುಟ್ಟಣ್ಣಯ್ಯನವರು ಕೂಡ ಆಗಮಿಸುತ್ತಾರೆ ಅಂದು ರಸ್ತೆಯ ವೀಕ್ಷಣೆ ಹಾಗೂ ಸ್ಥಳೀಯರ ಕುರಿತು ಚರ್ಚೆ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದರ್ಶನ್ ಪುಟ್ಟಣ್ಣವರಿಗೆ ಭೀಮಸಮುದ್ರ ರೈತ ಸಂಘದ ಮುಖಂಡರುಗಳು ಪಟಾಕಿ ಸಿಡಿಸುವ ಮೂಲಕ ಸ್ವಾಗತಿಸಿದರು. ನಂತರ ಅವರಿಗೆ ಹೂವಿನ ಹಾರ ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ರೈತ ಸಂಘದ ಮುಖಂಡರಾದ ಎ.ಎಲ್. ಕೆಂಪೇಗೌಡ, ಚಿತ್ರದುರ್ಗ ಜಿಲ್ಲಾ ಉಪಾಧ್ಯಕ್ಷರಾದ ಧನಂಜಯ್, ಹಂಪಯ್ಯನ ಮಳಿಗೆ ರೈತ ಸಂಘದ ಅಧ್ಯಕ್ಷರಾದ ಶಂಕರ್ ಮೂರ್ತಿ, ಉಪಾಧ್ಯಕ್ಷರಾದ ಪೂರಿ ನಾಯಕ, ಮುಖಂಡರುಗಳಾದ ಶಿವಕುಮಾರ್, ರಘು, ಪ್ರಸನ್ನ ಕುಮಾರ್ ಈಶಣ್ಣ ವೀರಣ್ಣ ನಾಗರಾಜ್ ನಾಯಕ್ ಶೈಲೂ ಎಸ್ ಪಟೇಲ್, ಎಸ್ ಕೆ ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್