ಶಿವಮೊಗ್ಗ: ಸದ್ಯ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಎಲೆ ಸಿಎಂ ಬಸವರಾಜ್ ಬೊಮ್ಮಾಯಿ ರಾಜ್ಯದಲ್ಲಿ ಕಠಿಣ ನಿಯಮಗಳನ್ನ ಜಾರಿ ಮಾಡಿದ್ದಾರೆ. ಕೊರೊನಾ ನಿಯಂತ್ರಣಕ್ಕೆ 50-50 ನಿಯಮ ಜಾರಿಗೆ ತಂದಿದ್ದು, ವೀಕೆಂಡ್ ಲಾಕ್ಡೌನ್ ಕೂಡ ಹೇರಲಾಗಿದೆ.
ಆದ್ರೆ ಈ ನಿಯಮಕ್ಕೆ ಜನ ಅದೆಷ್ಡು ಬೇಸತ್ತಿದ್ದಾರೋ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿದೆ. ವೀಕೆಂಡ್ ಕರ್ಫ್ಯೂ ಬಗ್ಗೆ ಸಚಿವ ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂ ದಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತೆ. ಕೂಲಿ, ಕಾರ್ಮಿಕರು ಆಟೋ ಚಾಲಕರು ಎಲ್ಲರಿಗೂ ತೊಂದರೆ ಉಂಟಾಗುತ್ತೆ. ದುಡಿಮೆ ಇಲ್ಲದೆ ಜನ ಎಲ್ಲಿಗೆ ಹೋಗಬೇಕು. ಜನರ ಅಭಿಪ್ರಾಯವನ್ನ ಕ್ಯಾಬಿನೇಟ್ ಮುಂದೆ ಇಡ್ತೇನೆ. ಜನ ನನ್ನನ್ನ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನಾಳೆ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ. ವೀಕೆಂಡ್ ಲಾಕ್ಡೌನ್ ಹಾಗೂ 50-50 ನಿಯಮಕ್ಕೆ ಸಚಿವರಿಂದಲೇ ಆಕ್ಷೇಪ ವ್ಯಕ್ತವಾಗಿದ್ದು, ಅದನ್ನು ಸರ್ಕಾರದ ಮುಂದಿಡುವ ಸಾಧ್ಯತೆ ಇದೆ.