ಬೆಂಗಳೂರು: ವಿಧಾನಪರಿಷತ್ ನಲ್ಲಿ ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತವಾಗಿದೆ. ಪರಿಷತ್ ಸದಸ್ಯರು ಹಿಂದಿ ದಿವಸ್ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾಗಿದೆ. ಹಿಂದಿ ಭಾಷೆ ಆಡಳಿತ ಭಾಷೆ ಅಲ್ಲ ಎಂದು ಬಿ ಕೆ ಹರಿಪ್ರಸಾದ್ ವಿರೋಧಿಸಿದ್ದಾರೆ.
ಇನ್ನು ಜೆಡಿಎಸ್ ಸದಸ್ಯರು ಬಾರಿಸು ಕಮ್ನಡ ಡಿಂಡಿಮವ ಹಾಡನ್ನು ಹಾಡಿದ್ದಾರೆ. ಹಿಂದಿ ದಿವಸ್ ಆಚರಣೆ ಬೇಡ ಎಂದೇ ಎಲ್ಲರ ಅಭಿಪ್ರಾಯವಾಗಿದೆ. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲೂ ಹಿಂದಿ ದಿವಸ್ ಗೆ ವಿರೋಧ ವ್ಯಕ್ತವಾಗುತ್ತಲೇ ಇದೆ.
ಇನ್ನು ಈ ಬಗ್ಗೆ ಸಿದ್ದರಾಮಯ್ಯ ಕೂಡ ಟ್ವೀಟಮಾಡಿದ್ದಾರೆ. ಯಾವುದೇ ಭಾಷೆಯ ಕಲಿಕೆಯನ್ನೂ ವಿರೋಧಿಸುವುದಿಲ್ಲ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ. ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ. ಕೇಂದ್ರದ ಬಿಜೆಪಿ ಸರ್ಕಾರ ಹಿಂದಿದಿವಸ ಆಚರಿಸಿ, ಹಿಂದಿ ಭಾಷೆಯ ಹೆಸರಲ್ಲಿ, ಆರ್ ಎಸ್ ಎಸ್ ಪ್ರಣೀತ ಹಿಂದುತ್ವ ಹೇರುವುದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.