ಬೆಳಗಾವಿ: ರೈತನಿಗೆ ಭೂಮಿಯೇ ಎಲ್ಲಾ. ಅದರಲ್ಲೂ ಫಲವತ್ತಾದ ಭೂಮಿಯಿದ್ದು ಬಿಟ್ಟರೆ ಅದರ ಮೇಲೆ ಜೀವ ಇಟ್ಟುಕೊಂಡಿರುತ್ತಾನೆ. ಅದೇ ಸಂಸಾರ ನೀಗಿಸುವ, ಹೊಟ್ಟೆ ತುಂಬಿಸುವ ದಾರಿಯಾಗಿರುತ್ತೆ. ಹೀಗಿರುವಾಗಾ ಅಂತ ಭೂಮಿಯನ್ನ ರಸ್ತೆ ಮಾಡಲು ಬಿಟ್ಟುಕೊಡಬೇಕೆಂದರೆ ಯಾರಿಗೆ ತಾನೇ ಮನಸ್ಸು ಒಪ್ಪುತ್ತೆ. ಅಂಥದ್ದೇ ವಿಚಾರಕ್ಕೆ ಇದೀಗ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯ ಹಲಗಾ ಮತ್ತು ಮಚ್ಚೆ ಬಳಿ ಬೈಪಾಸ್ ನಿರ್ಮಾಣ ಮಾಡುವ ಫ್ಲ್ಯಾನ್ ನಡೀತಾ ಇದೆ. ಆಧರೆ ಇದಕ್ಕೆ ರೈತರ ಸಂಪೂರ್ಣ ವಿರೋಧವಿದೆ. ಫಲವತ್ತಾದ ಭೂಮಿ ಬಿಟ್ಟುಕೊಡಲ್ಲ ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಜಮೀನು ಮಾಲೀಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರೈತರ ದೊಡ್ಡ ವಿರೋಧವಿದ್ದರು, ಅಲ್ಲಿ ಕಾಮಗಾರಿ ಆರಂಭವಾಗಿದೆ. ಪೊಲೀಸ್ ಭಧರತೆಯೊಂದಿಗೆ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಯತ್ನಿಸಿದ್ದಾರೆ. ಈ ವೇಳೆ ಕೋಪಗೊಂಡ ಜಮೀನು ಮಾಲೀಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.