Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಿವಮೊಗ್ಗ, ಬೆಂಗಳೂರು ಯುವತಿಯ ಸಿಂಧೂರ ಅಳಿಸಿದ ಉಗ್ರರಿಗೆ ‘ಆಪರೇಷನ್ ಸಿಂಧೂರ’ವೇ ಉತ್ತರ..!

---Advertisement---

ಪೆಹಲ್ಗಾಮ್ ನ ಸೌಂದರ್ಯ ಸವಿಯುತ್ತಿದ್ದ ನವ ಜೋಡಿಗಳನ್ಮ, ಕುಟುಂಬದ ಜೊತೆಗೆ ಹೋದವರನ್ನ ಏಪ್ರಿಲ್ 22ರಂದು ಉಗ್ರರು ಕೊಂದಿದ್ದರು. ಪುರುಷರನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದು ರಾಜಾ ರೋಷವಾವಿ ಹೇಳಿ ಹೋಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಉಗ್ರರ ಮೇಲೆ ಪ್ರತಿಕಾರದ ಜ್ವಾಲೆ ಉರಿಯುತ್ತಿದೆ. ಉಗ್ರರ ಮಟ್ಟ ಹಾಕಲು ಭಾರತ ಸಜ್ಜಾಗಿದೆ. ಭಾರತ ನಾರಿಯರ ಸಿಂಧೂರ ಅಳಿಸಿದ ಉಗ್ರರಿಗೆ ಆಪರೇಷನ್ ಸಿಂಧೂರದ ಮೂಲಕವೇ ಉತ್ತರ ಸಿಕ್ಕಿದೆ. ರಾತ್ರಿ ನಡೆದ ಆಪರೇಷನ್ ಸಿಂಧೂರದಲ್ಲಿ ಉಗ್ರರು ಮಟಾಶ್ ಆಗಿದ್ದಾರೆ.

ಉಗ್ರರ ಹತ್ಯೆಯಲ್ಲಿ ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಸೇರಿದಂತೆ 27 ಮಂದಿ ಅಸುನೀಗಿದ್ದರು. ಅಲ್ಲಿನ ಚಿತ್ರಣಗಳನ್ನು ನೋಡುವುದಕ್ಕೆ ಭಾರತೀಯರಿಗೆ ಕಷ್ಟವಾಗಿತ್ತು. ತಿನ್ನೋದಕ್ಕೂ ಗತಿ ಇಲ್ಲದ ಪಾಕಿಸ್ತಾನದ ಉಗ್ರರಿಗೆ ಇದೆಲ್ಲಾ ಬೇಕಿತ್ತಾ ಅಂತ ಈಗ ಅನಗನಿಸ್ತಾ ಇರ್ಬೇಕು. ಭಾರತ ಸಿಡಿದೆದ್ದರೆ ಏನಾಗಬಹುದು ಎಂಬ ಸೂಚನೆ ಈಗ ಅಲ್ಲಿನ ಸ್ಥಳೀಯರಿಗೆ ನಡುಕ ಹುಟ್ಟಿಸಿದೆ.

ಮಧ್ಯರಾತ್ರಿಯೇ ನಮ್ಮ ಸೈನಿಕರಿಂದ ಆಪರೇಷನ್ ಸಿಂಧೂರ ಶುರುವಾಗಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ನಮ್ಮ‌ ಭಾರತೀಯರ ಸಿಂಧೂರ ಅಳಿಸಿದ ಉಗ್ರರು ಹಾಗೂ ಪಾಕ್ ವಿರುದ್ಧ ಕೈಗೊಂಡ ಅತಿ ದೊಡ್ಡ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನ ಮಾಡಿದೆ. ಭಯೋತ್ಪಾದಕರ ಅಡಗುತಾಣಗಳನ್ನ ಗುರಿಯಾಗಿಸಿಕೊಂಡು 9 ಕಡೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಸತ್ತು ಬಿದ್ದಿರುವ ಬಗ್ಗೆ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...