ಚಿತ್ರದುರ್ಗ, (ಜೂ.16) : ನಗರ ಸೇರಿದಂತೆ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ನಗರ ಪೊಲೀಸ್ ಠಾಣೆಯ ಪೊಲೀಸರು 6 ಮೋಟಾರ್ ಸೈಕಲ್ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೋಟಾರ್ ಸೈಕಲ್ ಕಳುವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಯನ್ನು
ಪತ್ತೆ ಮಾಡಲು ಚಿತ್ರದುರ್ಗ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪಾಂಡುರಂಗರವರ
ಮಾರ್ಗದರ್ಶನದಲ್ಲಿ ಚಿತ್ರದುರ್ಗ ನಗರ ಠಾಣೆಯ ಪಿ.ಐ. ನಯಿಮ್ ಅಹಮ್ಮದ್ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಸೈಯದ್ ಸಿರಾಜುದ್ದಿನ್, ರಂಗಸ್ವಾಮಿ, ಮುಬಾರಕ್, ಶಿವರಾಜ್, ಮಧುಸೂಧನ್ ಜಿ.ಎನ್, ಬಿರೇಶ್ ಕೆ.ಬಿ ರವರವನ್ನೊಳಗೊಂಡ ತಂಡದವರು
ಪ್ರಕರಣದ ಅರೋಪಿಯಾದ ಮಂಜುನಾಥ್ ನನ್ನು (31 ವರ್ಷ) ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ
ಆವರಣದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ಚಿತ್ರದುರ್ಗ ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಸುಮಾರು 6 ಮೊಟಾರ್ ಸೈಕಲ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ
ತಿಳಿಸಿರುತ್ತಾನೆ.
ಆರೋಪಿತನಿಂದ ವಶಪಡಿಸಿಕೊಂಡಿರುವ ಮೋಟಾರ್ ಸೈಕಲ್ಗಳ ವಿವರ ಈ ಕೆಳಕಂಡಂತಿದೆ :
1) ಕೆ.ಎ.16.ಇ.ಎಸ್ 4242 ಹಿರೋ ಕಂಪನಿಯ ಸ್ಪೆಂಡರ್ ಪ್ಲಸ್ ಮೊಟಾರ್ ಸೈಕಲ್
2) ಕೆ.ಎ.16.ಇ.ಸಿ.3581 ನೇ ನಂಬರ್ ನ ಹಿರೋ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಬೈಕ್
3) ಕೆ.ಎ17.ವೈ.6287 ಹಿರೋ ಕಂಪನಿಯ ಸ್ಪೆಂಡರ್ ಪ್ಲಸ್ ಬೈಕ್
4) ಕೆ.ಎ.17.ವೈ.7792 ಹಿರೋ ಹೊಂಡ ಕಂಪನಿಯ ಪ್ಯಾಷನ್ ಪ್ಲಸ್ ಬೈಕ್
5) ಕೆ.ಎ.16.ವಿ. 3164 ಹಿರೋ ಹೊಂಡಾ ಕಂಪನಿಯ ಸ್ಪ್ಲೆಂಡರ್ ಪ್ಲಸ್ ಬೈಕ್
6) ಕೆ.ಎ-16.ಇಜಿ 3596 ನೇ ನಂಬರ್ ನ ಹೊಂಡಾ ಕಂಪನಿಯ ಡಿಯೋ ಸ್ಕೂಟರ್ ಗಳಾಗಿದ್ದು ಇವುಗಳ ಅಂದಾಜು ಮೌಲ್ಯ ಸುಮಾರು-3,00,000/- ರೂಪಾಯಿ ಆಗಿರುತ್ತದೆ.
ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.