ಬೆಂಗಳೂರು: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿಯ ಬೆನ್ನಲ್ಲೇ ಆಪರೇಷನ್ ಕಮಲ, ಆಪರೇಷನ್ ಹಸ್ತದ ಚರ್ಚೆಯೂ ಜೋರಾಗಿದೆ. ಈ ಬಾರಿ ಬಿಜೆಪಿ ಸೋಲಿಸಲು ವಿಪಕ್ಷಗಳೆಲ್ಲಾ ಒಂದಾಗಿವೆ. ಈ ಸಂಬಂಧ ಮಾತನಾಡಿರುವ ಸಚಿವ ಎಂಬಿ ಪಾಟೀಲ್, ಆಪರೇಷನ್ ನಂತರ ಇವರ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆಯಲ್ಲ ಎಂದೇ ಹೇಳಿದ್ದಾರೆ.
ಆಪರೇಷನ್ ಕಮಲ ಮಾಡುವುದಕ್ಕೆ 65 ಶಾಸಕರು ಬೇಕು. ಅಷ್ಟು ಶಾಸಕರು ಬಿಜೆಪಿಯವರಿಗೆ ಸಿಕ್ತಾರಾ..? ಐದು ಜನ ಶಾಸಕರು ಕೂಡ ಸಿಗಲ್ಲ. ಬಿಜೆಪಿ ಮುಳುಗುತ್ತಿರೊ ಹಡಗಲ್ಲ, ಈಗಾಗಲೇ ಮುಳುಗಿರುವ ಹಡಗು. ಮಾಜಿ ಶಾಸಕ ರೇಣುಕಾಚಾರ್ಯ ನಿನ್ನೆ ಹೇಳಿಕೆ ನೀಡಿಲ್ವಾ. ಬಿಜೆಪಿಯಲ್ಲಿ ಯಾವುದೇ ನಾಯಕ ಇಲ್ಲ ಅಂತ. ಬಿಜೆಪಿಯಲ್ಲಿ ಏನು ಉಳಿದಿಲ್ಲ, ಸಂಪೂರ್ಣ ನಿರ್ನಾಮ ಆಗುತ್ತಾರೆ ಎಂದಿದ್ದಾರೆ.
ಇದೇ ವೇಳೆ ಐಟಿ ದಾಳಿ ಬಗ್ಗೆ ಮಾತನಾಡಿ, ಐಟಿ ದಾಳಿಯಾಗಿದೆ. ಐಟಿಯವರೇ ತನಿಖೆ ನಡೆಸುತ್ತಾರೆ. ಇದು 40₹ ಕಮಿಷನ್ ಹಣ. ಹಾಗಾಗಿ ಅದು ಬಿಜೆಪಿಯವರ ಹಣನೇ ಅದು. ನಮ್ಮ ಕಾಲದಲ್ಲಿ ಆಗಿರುವುದು ಅಲ್ಲ. ನಮ್ಮ ಕಾಲದಲ್ಲಿ ಇನ್ನೂ ಟೆಂಡರೇ ಆಗಿಲ್ಲ ಎಂದಿದ್ದಾರೆ.
ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ದಿನೇಶ್ ಗುಂಡೂರಾವ್ ಕೂಎ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕವನ್ನು ಯಾವ ರೀತಿಯಲ್ಲಿ ಎಟಿಎಂಗಿಂತ ದುರುಪಯೋಗ ಮಾಡಿಸಿಕೊಂಡ್ರು ಅನ್ನೋದು ಜನರಿಗೂ ಗೊತ್ತಿದೆ. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಕಾಂಗ್ರೆಸ್ ಗೆ ಮಸಿ ಬಳಿಯುವ ಪ್ರಯತ್ನ ನಡೆಸುತ್ತಿದ್ದಾರೆ. ಐಟಿ, ಸಿಬಿಐ ಎಲ್ಲಾ ಅವರ ಕೈಯಲ್ಲೇ ಇರುವುದು. ಐಟಿ, ಸಿಬಿಐ ಅವರ ನಿರ್ದೇಶನದಂತೆ ನಡೆಯುತ್ತದೆ. ಸಿಬಿಐ ಗೆ ಐಟಿ ಅವರೆ ಪ್ರಕರಣವನ್ನು ನೀಡಬೇಕು. ರೇಡ್ ಸಂದರ್ಭ ಯಾರಲ್ಲಿ ಹಣ ಸಿಕ್ಕಿದೆ ಅವರು ಯಾರೂ ಕಾಂಗ್ರೆಸ್ ನವರಲ್ಲ ,ಯಾರೇ ತಪ್ಪು ಮಾಡಿದರೆ ಅವರ ವಿರುದ್ಧ ಕ್ರಮ ಆಗಲಿ . ಅದನ್ನ ಸ್ವಾಗತ ಮಾಡುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.