Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಲು ಗುರುವಿನಿಂದ ಮಾತ್ರ ಸಾಧ್ಯ : ಶ್ರೀ ರಾಮಾನಂದ ಭಾರತಿ ಸ್ವಾಮೀಜಿ

Facebook
Twitter
Telegram
WhatsApp

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ: 87220 22817

ಚಿತ್ರದುರ್ಗ,(ನ.18) :  ಗುರುವಿಗೆ ಶರಣಾದಾಗ ಮಾತ್ರ ಜೀವನದಲ್ಲಿ ಸನ್ಮಾರ್ಗ ದೊರೆಯಲು ಸಾಧ್ಯವಿದೆ. ಪ್ರಪಂಚದಲ್ಲಿ ಎಲ್ಲವೂ ಇದೆ ನಮಗೆ ಹಿತವಾದದನ್ನು ಮಾತ್ರ ನಾವು ಬಳಸಬೇಕಿದೆ ಎಂದು ಹುಬ್ಬಳ್ಳಿ ಶ್ರೀ ಜಡೇಸಿದ್ದೇಶ್ವರ ಮಠದ ಶ್ರೀ ರಾಮಾನಂದ ಭಾರತಿ ಶ್ರೀಗಳು ತಿಳಿಸಿದರು.

ನಗರದ ಶ್ರೀ ಕಬೀರಾನಂದಾಶ್ರಮದವತಿಯಿಂದ ಕಬೀರಾನಂದ ಆಶ್ರಮದ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 65ನೇ ಮತ್ತು ಶ್ರೀ ಸದ್ಗುರು ಕಬೀರೇಶ್ವರ ಶ್ರೀಗಳ 55ನೇ ಪುಣ್ಯಾರಾಧನೆ ಸಮಾರಂಭದ ದಿವ್ಯ ಉಪಸ್ಥಿತಿವಹಿಸಿ ಮಾತನಾಡಿದರು.

ಬದುಕಿನಲ್ಲಿ ಪುಣ್ಯವನ್ನು ಸಂಪಾದಿಸಿದವರ ಪುಣ್ಯಾರಾಧನೆಯನ್ನು ಮಾತ್ರ ಮಾಡಲಾಗುತ್ತದೆ. ಜೀವದ ಬಳ್ಳಿಯನ್ನು ಕತ್ತರಿಸಿ, ಪುಣ್ಯದ ಬಳ್ಳಿಯನ್ನು ಬೆಳಸಬೇಕಿದೆ.ಪುಣ್ಯದಿಂದ ವಿವೇಕ, ವ್ಯರಾಗ್ಯ, ಜ್ಞಾನ, ಮೋಕ್ಷ ಪ್ರಾಪ್ತಿಯಾಗುತ್ತದೆ. ಪುಣ್ಯಾರಾಧನೆಯ ನಿಮಿತ್ತ ಸದ್ಗುರು ನಾಮಸ್ಮರಣೆಯನ್ನು ಮಾಡಬೇಕಿದೆ. ಜೀವನದಲ್ಲಿ ಪುಣ್ಯ ಇರುವವರೆಗೆ ಗುರುವಾದ ಪರಮಾತ್ಮನನ್ನು ಮರೆಯಬಾರದು. ಸೂರ್ಯ ಚಂದ್ರರವರು ಹೂರಗಿನ ಕತ್ತಲೆಯನ್ನು ಹೂಗಲಾಡಿಸಲು ಸಾಧ್ಯವಿದೆ. ಆದರೆ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಲು ಗುರುವಿನಿಂದ ಮಾತ್ರ ಸಾಧ್ಯವಿದೆ ಎಂದರು.

ಗುರು ಪರಮಾತ್ಮನಿಗಿಂತ ಶ್ರೇಷ್ಠ, ಗುರುವಿಗೆ ಭಗವಂತನನ್ನು ತೋರಿಸುವ ಶಕ್ತಿಯಿದೆ. ಗುರುವಿಗೆ ಶರಣಾಗತಿಯಾದಾಗ ಸನ್ಮಾರ್ಗದಲ್ಲಿ ಕಂಡುಕೊಳ್ಳಲು ಸಾಧ್ಯವಿದೆ. ಸಿದ್ದಾರೂಢರವರ ಹತ್ತಿರ ಹೋದವರು ಮಹಾತ್ಮರಾಗಿದ್ದಾರೆ. ಅವರು ಇದ್ದ ಸ್ಥಳಗಳು ಸಹಾ ಇಂದು ಮಹತ್ತರವಾದ ದೇಗುಲಗಳಾಗಿವೆ. ಹಿಂದೆ ಗುರು ಇದ್ದು ಮುಂದೆ ಗುರಿ ಇದ್ಧಾಗ ಮಾತ್ರ ಮಾನವ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಶ್ರೀ ರಾಮಾನಂದ ಭಾರತಿ ಶ್ರೀಗಳು ತಿಳಿಸಿದರು.

ಮೈಸೂರಿನ ಕೆ.ಆರ್ ನಗರದ ಕಾಗಿನೆಲೆ ಶಾಖಾ ಮಠದ ಶ್ರೀ ಶಿವಾನಂದ ಶ್ರೀಗಳು ಮಾತನಾಡಿ, ಭಗವಂತ ಇದ್ದ ಕಡೆಗಳಲ್ಲಿ ಸುಖ ಶಾಂತಿ ಇರುತ್ತದೆ. ದೇಹದಲ್ಲಿ ಭಗವಂತ ಇದ್ದಾಗ ದೇಹ ಪರಿಶುದ್ದವಾಗುತ್ತದೆ. ಗುರುವಿನ ಪಾದವನ್ನು ಸ್ಫರ್ಶ ಮಾಡಿದವರು ಧನ್ಯರಾಗುತ್ತಾರೆ. ಪರಮಾತ್ಮನ ಚಿಂತನೆಯಲ್ಲಿ ಜೀವನವನ್ನು ಸಾಗಿಸಬೇಕಿದೆ ಎಂದರು.

ಮಾತೃಶ್ರೀ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಮಾತನಾಡಿ, ಕಬೀರಾನಂದ ಅಜ್ಜನವರು ಇಲ್ಲಿ ಗೋಶಾಲೆಯನ್ನು ಪ್ರಾರಂಭ ಮಾಡಿ ನಂತರ ಮಠವನ್ನು ಸ್ಥಾಪನೆ ಮಾಡುವತ್ತ ಮುಂದಾದರು ಮೂಂಚೆ ಗೋವುಗಳ ರಕ್ಷಣೆಯನ್ನು ಮಾಡಿದರು. ಶ್ರೀಮಠ ಯಾವುದೇ ಜಾತಿಗೆ ಸೀಮಿತವಾಗದೆ ಜಾತ್ಯಾತೀತ ಮಠವಾಗಿದೆ. ಈಗಿನ ಶ್ರೀ ಶಿವಲಿಂಗಾನಂದ ಶ್ರೀಗಳ ಕಾರ್ಯದಿಂದ ಮಠ ಮತ್ತಷ್ಟು ಪ್ರಗತಿಯನ್ನು ಸಾಧಿಸಿದೆ. ಹುಟ್ಟಿನಿಂದ ಸಾಯುವರೆಗೆ ಜೀವನದಲ್ಲಿ ಜಂಜಾಟ ಇರುತ್ತದೆ ಅದರ ಮಧ್ಯದಲ್ಲಿಯೂ ಸಹಾ ಇಂತಹ ಶ್ರೀಗಳ ಸಹವಾಸವನ್ನು ಮಾಡಬೇಕಿದೆ ಎಂದು ತಿಳಿಸಿದರು.

ಸಾಹಿತಿಗಳಾದ ಬಿ.ಆರ್ ಪುಟ್ಟಪ್ಪ ಮಾತನಾಡಿ, ಗುರುವಿನ ಸಾನಿಧ್ಯದಲ್ಲಿ ಪುಣ್ಯವನ್ನು ಪಡೆಯಬೇಕಿದೆ, ಮುಕ್ತಿಯನ್ನು ಪಡೆಯಲು ಬೇರೆ ಕಡೆಗೆ ಹೋಗುವ ಅಗತ್ಯ ಇಲ್ಲ ಗುರುವಿನ ಕರುಣೆ ಇದ್ದರೆ ಸಾಕು ಅದು ತಾನಾಗಿಯೇ ಒಲಿಯುತ್ತದೆ. ಗುರುವಿನ ನಾಮಸ್ಮರಣೆಯಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಗುರುವಿನ ಸಾನಿಧ್ಯದಲ್ಲಿ ನಗವಂತನನ್ನು ಕಾಣಬೇಕಿದೆ ಎಂದರು.

ಸಮಾರಂಭದ ಸಾನಿಧ್ಯವಹಿಸಿದ್ದ ಕಬೀರಾನಂದ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ಮಾತನಾಡಿ, ಕಬೀರಾನಂದ ಶ್ರೀಗಳ ಸೇವೆಯನ್ನು ಮಾಡಿದವರು ಇಂದು ಉತ್ತಮ ಸ್ಥಾನವನ್ನು ಪಡೆದಿದ್ದಾರೆ. ಗೋಶಾಲೆಯನ್ನು ಪ್ರಾರಂಭ ಮಾಡುವುದರ ಮೂಲಕ ಇಲ್ಲಿಗೆ ಆಗಮಿಸಿದ ಶ್ರೀಗಳ ಶ್ರೀ ರಕ್ಷೆ ಮಠದ ಮೇಲೂ ಇದೆ.  ಸಂತರು ಲೋಕದ ಹಿತವನ್ನು ಬಯಸುತ್ತಾರೆ ಸ್ವಾರ್ಥ ಹಿತವನ್ನಲ್ಲ, ಗುರು ಪಾಪವನ್ನು ತೊಳೆಯುತ್ತಾನೆ, ಕಬೀರಾನಂದರು ದೇಶವನ್ನು ಸಂಚಾರ ಮಾಡುವುದರ ಮೂಲಕ ಲೋಕದ ಚಿಂತನೆಯನ್ನು ಮಾಡಿದರು ಎಂದರು.

ಕಾರ್ಯಕ್ರಮದಲ್ಲಿ ಕುಂಬಾರ ಗುರುಪೀಠದ ಶ್ರೀ ಕುಂಬಾರ ಗುಂಡಯ್ಯ ಶ್ರೀಗಳು ಸಾನಿಧ್ಯವಹಿಸಿದ್ದರು.

ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ವೆಂಕಟೇಶ್, ಸದಸ್ಯರಾದ ವೆಂಕಟೇಶ್, ನಗರಾಭೀವೃದ್ದಿ ಪ್ರಾಧಿಕಾರದ ಸದಸ್ಯರಾದ ಶ್ರೀಮತಿ ರೇಖಾ, ಭಕ್ತರಾದ ತ್ಯಾಗರಾಜ್, ಹರಿಯಬ್ಬೆ ತಿಮ್ಮಣ್ಣ ಭಾಗವಹಿಸಿದ್ದರು. ಕಳೆದ 11 ರಿಂದ 17ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆದಿದ್ದು, 17 ರ ಬೆಳಿಗ್ಗೆ ಶ್ರೀ ಕೃರ್ತ ಗದ್ದುಗೆಗೆ ರುದ್ರಾಭೀಷೇಕ ಕಾರ್ಯಕ್ರಮ ನಡೆಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!