ದೇಶದಲ್ಲಿ ಅಸಮಾನತೆಯನ್ನು ತೊಲಗಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ : ಲಕ್ಷ್ಮಣ ಬಂಡಾರಿ

ಕುರುಗೋಡು. (ಜ.01) ಸಂಘಟನೆ ಕಟ್ಟುವ ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಬೆಳೆಯುವುದು ಬಹಳ ಮುಖ್ಯ ಎಂದು ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಬಂಡಾರಿ ಹೇಳಿದರು.

ಸಮೀಪದ ಎಂ. ಸೂಗೂರು ಗ್ರಾಮದ ಮಟ್ಟಿ ಯಲ್ಲಿ ಅಂಬೇಡ್ಕರ್ ರಾತ್ರಿ ಶಾಲೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ದೇಶದಲ್ಲಿ ಅಸಮಾನತೆಯನ್ನು ತೊಲಗಿಸಿ ಸಮಾನತೆಯನ್ನು ರೂಪಿಸಬೇಕು ಜೊತೆಗೆ ಪ್ರತಿಯೊಂದರಲ್ಲಿ ಸಾಧನೆ ಮಾಡಬೇಕು ಎಂದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಪಡಿಯಬೇಕು ಇದರಿಂದ ಮಾತ್ರ ಎಲ್ಲವನ್ನು ಗೆಲ್ಲಲು ಸಾಧ್ಯ ಎಂದರು.

ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟ ಇವುಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕು ಆದಾಗ ಮಾತ್ರ ಪ್ರತಿಯೊಂದು ಯಶಸ್ವಿ ಕಾಣಲು ಸಾಧ್ಯ ಎಂದು ತಿಳಿಸಿದರು.

ಶಿಕ್ಷಣ ಇಲ್ಲದೆ ಸಂಘಟನೆ ಮಾಡಿದರು ಏನು ಸಾದಿಸಲು ಸಾಧ್ಯ ವಿಲ್ಲ, ಬಳ್ಳಾರಿ ಜಿಲ್ಲೆಯಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ತಳ ಸಮುದಾಯದ ಮಕ್ಕಳು ಗುಣ ಮಟ್ಟದ ಶಿಕ್ಷಣ ಪಡಿಯದೆ ವಂಚಿತರಾಗಿದ್ದಾರೆ. ಕೇವಲ ಎಸ್. ಎಸ್. ಎಲ್. ಸಿ. ಪಿಯುಸಿ ವ್ಯಾಸಂಗ ಮಾಡಿ ಪದವಿ ಪಡಿಯದೆ ಅರ್ಧ ದಲ್ಲಿ ಮಟುಕುಗೊಳಿಸಿದಂತಹ ಮಕ್ಕಳು ಹೆಚ್ಚಿದ್ದಾರೆ ಆದ್ದರಿಂದ ಅಂತವರಿಗೆ ಉತ್ತಮ ಶಿಕ್ಷಣ ಕೊಡಲು ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಪ್ರತಿಯೊಂದು ಗ್ರಾಮ ದಲ್ಲಿ ರಾತ್ರಿ ಅಂಬೇಡ್ಕರ್ ಶಾಲೆಯನ್ನು ತೆಗೆಯಲಾಗುತ್ತಿದೆ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರು ಸ್ವಾತಂತ್ರ್ಯ ವಾಗಿ,ಸ್ವಾಭಿಮಾನದಿಂದ ಬದುಕಲು ಇದರ ಜೊತೆಗೆ ಮೂಲಭೂತ ಹಕ್ಕುಗಳನ್ನು ಪಡೆದು ಉತ್ತಮ ಜೀವನ ನಡೆಸಲು ಅಂಬೇಡ್ಕರ್ ಅವರು ಸಂವಿಧಾನವನ್ನು ಅರ್ಪಿಸಿದ್ದಾರೆ ಇದರಿಂದ ನಾವು ಎಲ್ಲವುದನ್ನು ಪಡೆದುಕೊಳ್ಳಬಹುದುದಾಗಿದೆ ಎಂದರು.

ರಾತ್ರಿ ಶಾಲೆಯಲ್ಲಿ 1ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುವುದು ಇದರಲ್ಲಿ 1 ರಿಂದ 4ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಹಾಕಿಕೊಟ್ಟ ಹೋಮ್ ವರ್ಕ್ ಬಗ್ಗೆ ಹೇಳಿಕೊಡಲಾಗುವುದು ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯತರ ಚಟುವಟಿಕೆಗಳ ಜೊತೆಗೆ ನವೋದಯ, ಮೂರರ್ಜಿಗೆ ಸಂಬಂದಿಸಿದ ತರಬೇತಿಗಳನ್ನು ಹೇಳಿಕೊಡಲಾಗುವುದು. ಹಾಗೂ ಅದಕ್ಕೆ ಅರ್ಜಿ ಹಾಕುವ ಜವಾಬ್ದಾರಿ ಯನ್ನು ನಮ್ಮ ಸಂಘಟನೆ ವಹಿಸಲಾಗುತ್ತದೆ. ಇದಕ್ಕೆ ಸಂಬಂದಿಸಿದ ಶಿಕ್ಷಕರಿಗೆ ನಮ್ಮ ಸಂಘಟನೆ ಗೌರವಧನ ಕೂಡ ನೀಡುತ್ತದೆ ಎಂದು ತಿಳಿಸಿದರು.

ನಂತರ ಭೀಮವಾದ ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಸೋಮಪ್ಪ ಛಲವಾದಿ ಮಾತನಾಡಿ,ದೇಶದಲ್ಲಿ ಪ್ರತಿಯೊಬ್ಬರು ಏನಾದ್ರೂ ಸಮಾನತೆಯನ್ನು ಕಾಣಬೇಕಾದರೆ ಅದು ಬಾಬಾ ಸಾಹೇಬ್ರು ಕೊಟ್ಟ ಸಂವಿಧಾನ ದಿಂದ ಅದಕ್ಕೆ ಇದರ ಅಡಿಯಲ್ಲಿ ಪ್ರತಿಯೊಬ್ಬರು ಪ್ರತಿಯೊಂದು ಸೌಲಭ್ಯ ವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದಕ್ಕೆ ಹೆಚ್ಚು ಒತ್ತು ನೀಡಬೇಕು. ಇದರಿಂದ ಮಾತ್ರ ಪ್ರತಿಯೊಂದು ಸಾಧಿಸಲು ಸಾಧ್ಯ ಎಂದರು.

ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಒಂದೇ ಅಲ್ಲ ಅದರ ಜೊತೆಗೆ ಹೇಗೆ ಕಲಿಯುತ್ತಿದ್ದಾರೆ ಎಂದು ಅವರ ಮೇಲೆ ನಿಗವಹಿಸಬೇಕು ಅಗಾ ಮಾಡಿದಾಗ ಮಾತ್ರ ಪ್ರತಿಯೊಬ್ಬ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳುವುದಕ್ಕೆ ಅನುಕೂಲ ವಾಗುತ್ತದೆ ಎಂದರು.

ತದನಂತರ ಶಿಕ್ಷಕ ಈರಣ್ಣ ಮಾತನಾಡಿದರು.

ಪ್ರಾರಂಭದಲ್ಲಿ ಸಂವಿಧಾನದ ಪಿಠಿಕೆ ಓದುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಶೇಖರ, ಗ್ರಾಪಂ ಸದಸ್ಯರಾದ ಮಾರೇಶ, ಎಸ್. ಡಿ. ಎಂ. ಸಿ. ಅಧ್ಯಕ್ಷ ಮುದಿಯಪ್ಪ,ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆ ಉಮೇಶ್, ಮಂಜುನಾಥ್, ಭೇಮ್ ಆರ್ಮಿ ಸಂಘಟನೆ ಯ ಅಧ್ಯಕ್ಷ ಮಾರೆಪ್ಪ,ಪ್ರಧಾನ ಕಾರ್ಯದರ್ಶಿ ರಮೇಶ್,ಉಪಾಧ್ಯಕ್ಷ ಹನುಮಂತಪ್ಪ, ಹಿರಿಯ ಮುಖಂಡರಾದ ಪ್ರಕಾಶ್,ಮಲ್ಲಪ್ಪ, ರಾಘವೇಂದ್ರ,ದೊಡ್ಡಬಸಪ್ಪ,ಬಸವರಾಜ್,ಬುದುಗುಂಪ ಹುಲುಗಪ್ಪ,ನಾಗರಾಜ್,ಕೆಂಚಪ್ಪ,ವಿರೇಶ್, ರಾಮಣ್ಣ, ಭೀರಪ್ಪ,ಮಾಜಿ ಅಧ್ಯಕ್ಷ ಶೇಖರ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!