ಸರ್ಕಾರ ಈರುಳ್ಳಿ ಮೇಲಿನ ರಫ್ತು ಸುಂಕವನ್ನ ಹಿಂಪಡೆದುಕೊಂಡಿದೆ. ಏಪ್ರಿಲ್ 1ರಿಂದ ಈರುಳ್ಳಿಯ ರಫ್ತಿ ಅನಿರ್ಬಂಧಿತವಾಗುತ್ತಿದೆ. ಈರುಳ್ಳಿ ಶೇಕಡ 20 ರಷ್ಟು ರಫ್ತು ಸುಂಕವನ್ನ ಹೊಂದಿದೆ. ಇದು ಈರುಳ್ಳಿ ಬೆಳೆಗಾರರಿಗೆ ಅನುಕೂಲವಾಗುವಂತದ್ದು. ಆದರೆ ಇದರಿಂದ ಈರುಳ್ಳಿಯ ಕೊರತೆ ಉಂಟಾಗಬಹುದು. ಇದರಿಂದ ಸಾಮಾನ್ಯವಾಗಿಯೇ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಸರ್ಕಾರ ಜನಸಾಮಾನ್ಯರಿಗೆ ಭರವಸೆಯನ್ನು ನೀಡಿದೆ. ಯಾವುದೇ ರೀತಿಯ ಬೆಲೆ ಏರಿಕೆ ಹೊಣೆಯಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದೆ. ಈರುಳ್ಳಿ ಮೇಲೆ ಶೇಕಡ 20 ರಷ್ಟಿದ್ದ ರಫ್ತು ಸುಂಕವನ್ನು ಏಪ್ರಿಲ್ 1 ರಿಂದ ಹಿಂಪಡೆಯಲು ನಿರ್ಧರಿಸುವುದಾಗಿ ಕಂದಾಯ ಇಲಾಖೆ ಮೊನ್ನೆಯಷ್ಟೇ ಅಧಿಸೂಚನೆಯನ್ನು ಹೊರಡಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆಯೊಂದಿಗೆ ಚರ್ಚೆ ನಡೆಸಿ ಕಂದಾಯ ಇಲಾಖೆ ಈ ನಿರ್ಧಾರವನ್ನು ಕೈಗೊಂಡಿದೆ.

ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೂ ಉತ್ತಮ ಬೆಲೆ ಸಿಗಬೇಕು ಎನ್ನುವುದು ಸರ್ಕಾರದ ಬದ್ಧತೆಯಾಗಿದೆ. ಈ ಬದ್ಧತೆಗೆ ಪೂರಕವಾಗಿಯೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಪ್ರಹ್ಲಾದ್ ಜೋಶಿ ನೇತೃತ್ವದ ಗ್ರಾಹಕ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ಆರೇಳು ತಿಂಗಳಿನಿಂದ ಈರುಳ್ಳಿ ರಫ್ತಿಗೆ ನಿರ್ಬಂಧಗಳನ್ನ ಹಾಕಲಾಗಿದೆ. ಶೇಕಡ 20ರಷ್ಟು ಸುಂಕ ಇದ್ದರು, ಈರುಳ್ಳಿ ರಫ್ತಿನಲ್ಲಿ ಏರಿಕೆ ಆಗುತ್ತಲೆ ಇದೆ. 2024ರ ಸೆಪ್ಟೆಂಬರ್ ನಿಂದ ಈರುಳ್ಳಿ ರಫ್ತಿಗೆ ಶೇ.20ರಷ್ಟು ಇದೆ. ಈ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ 1.17 ಮಿಲಿಯನ್ ಟನ್ ಈರುಳ್ಳಿ ರಫ್ತಾಗಿರುವುದು ತಿಳಿದು ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ 72 ಸಾವಿರ ಟನ್ ಈರುಳ್ಳಿ ರಫ್ತಾಗಿದೆ. 2025ರಜನವರಿ ತಿಂಗಳಲ್ಲಿ ರಫ್ತಾಗಿರುವ ಈರುಳ್ಳಿಯೂ 1,85,000 ಟನ್ ಆಗಿದೆ.


