ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದು ಮನೆಯಲ್ಲಿ ಅಡುಗೆ ಮಾಡುವವರ ಪಾಲಿಗೆ, ಹೊಟೇಲ್ ಉದ್ಯಮಿಗಳಿಗೆ ಹೆಚ್ಚು ತಲೆ ನೋವಾಗಿದೆ. ಹೀಗೆ ದಿನನಿತ್ಯ ಬಲಸುವ ಪದಾರ್ಥಗಳು ಹೀಗೆ ಬೆಲೆ ಏರಿಕೆಯಾಗುತ್ತಲೇ ಇದ್ದರೆ ಜನಸಾಮಾನ್ಯರು ಬದುಕುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಈಗ ಈರುಳ್ಳಿಯಂತು ದಿನೇ ದಿನೇ ಏರಿಕೆಯತ್ತಲೇ ಮುಖ ಮಾಡಿದೆ.
ದೆಹಲಿ, ಮುಂಬೈ ಸೇರಿ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಜಾಸ್ತಿಯಾಗಿದೆ. ಬೆಂಗಳೂರಿನಲ್ಲಿಯೂ ಹೊರತಾಗಿಲ್ಲ. ಬೆಂಗಳೂರು ನಗರದಲ್ಲಿಯೂ ಈರುಳ್ಳಿ ಬೆಲೆ ಜಾಸ್ತಿಯಾಗಿದ್ದು, 40-50 ರೂಪಾಯಿಯಷ್ಟಿದ್ದ ಈರುಳ್ಳಿ ಬೆಲೆ ಈಗ 80-90 ರೂಪಾಯಿ ಆಗಿದೆ. ಈ ಬೆಲೆ ಏರಿಕೆ ಸಹಜವಾಗಿಯೇ ರೈತರ ಮೊಗದಲ್ಲಿ ಸಂತಸ ತಂದಿದೆ. ಆದರೆ ಗ್ರಾಹಕರಿಗೆ ಕಣ್ಣೀರು ತರಿಸಿದೆ.
ಈ ಸಮಯಕ್ಕೆ ಹೋಲಿಕೆ ಮಾಡಿಕೊಂಡರೆ ಸಾಮಾನ್ಯವಾಗಿ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಈಗ ನೋಡೊದರೆ ಬೆಲೆ ಗಗನ ಕುಸುಮವಾಗುತ್ತಲೆ ಇದೆ. ಕೆಜಿ ಈರುಳ್ಳಿಗೆ 80 ರೂಪಾಯಿ ಕೊಟ್ಟು ತೆಗೆದುಕೊಂಡರೆ ಮಿಡಲ್ ಕ್ಲಾಸ್ ಮಂದಿ ಬದುಕುವುದಾದರೂ ಹೇಗೆ..? ಕೆಜಿ ಈರುಳ್ಳಿ ಒಂದು ವಾರಗಳ ಕಾಲ ಬಳಕೆಗೆ ಬರುವುದು ಹೆಚ್ಚು. ಹೀಗಿರುವಾಗ ಬಡವರ ಬದುಕು ಹೇಗೆ ಸಾಗುತ್ತದೆ ಎಂಬ ಚಿಂತೆ ಹಲವರಿಗಾಗಿದೆ. ಹೆಚ್ಚು ಮಳೆಯಿಂದಾಗಿ ಈರುಳ್ಳಿ ಬೆಳೆಯೆಲ್ಲಾ ನಾಶವಾಗಿದೆ. ಈಗ ಏನು ಮಾರಾಟವಾಗುತ್ತಿದೆ ಇದೆಲ್ಲಾ ಹಳೆಯ ಸ್ಟಾಕ್ ಆಗಿದೆ. ಉತ್ತಮ ಗುಣಮಟ್ಟದ ಈರುಳ್ಳಿಗೆ ಒಳ್ಳೆಯ ಬೆಲೆಯೂ ಸಿಗುತ್ತಿದೆ. ಆಸರೆ ಕೊಂಡುಕೊಳ್ಳುವವರಿಗೇನೆ ಈರುಳ್ಳಿ ಕಣ್ಣೀರು ತರಿಸುತ್ತಿರುವುದು. ಆದಷ್ಟು ಬೇಗ ದಿನಬಳಕೆಯ ಸಾಮಾಗ್ರಿಗಳ ಮೇಲೆ ಬೆಲೆ ಹತೋಟಿಗೆ ಬಂದರೆ ಸಾಕು ಎನ್ನುತ್ತಿದ್ದಾರೆ ಗೃಹಿಣಿಯರು.