ಅಶ್ಲೀಲ ವಿಡಿಯೋ ಪ್ರಕರಣ : ಸತ್ಯ ಗೊತ್ತಿಲ್ಲದವರು ಬಾಯಿ ಮುಚ್ಚಿಕೊಂಡಿರಿ ಎಂದ ರಾಜ್ ಕುಂದ್ರಾ..!

ಅಶ್ಲೀಲ ವಿಡಿಯೋ ಪ್ರಕರಣ : ಸತ್ಯ ಗೊತ್ತಿಲ್ಲದವರು ಬಾಯಿ ಮುಚ್ಚಿಕೊಂಡಿರಿ ಎಂದ ರಾಜ್ ಕುಂದ್ರಾ..!

ಮುಂಬೈ ಬೆಡಗಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿಚಾರ ಎಲ್ಲರಿಗೂ ಗೊತ್ತಿರುವಂತ ವಿಚಾರವೇ ಸರಿ. ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಒಂದಷ್ಟು ದಿನ ಜೈಲಿನಲ್ಲಿ ಇದ್ದು ಬಂದವರು. ಜಾಮೀನಿನ ಮೇಲೆ ಬಿಡುಗಡೆಯಾಗಿ ಒಂದು ವರ್ಷವಾಗಿದೆ. ಆದರೆ ರಾಜ್ ಕುಂದ್ರಾ ಇಲ್ಲಿಯ ತನಕ ಹೆಚ್ಚು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದೇ ಇಲ್ಲ. ಆದರೆ ಇದೀಗ ಆ ವಿಚಾರದಲ್ಲಿ ಮೌನಮುರಿದು, ಕೇಳಿದವರಿಗೆ ಖಾರವಾಗಿ ಉತ್ತರಿಸಿದ್ದಾರೆ.

ರಾಜ್ ಕುಂದ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಅದರಲ್ಲಿ ಮುಖ ಮುಚ್ಚಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಅದಕ್ಕೆ ಅಸಲಿ ಕಥೆ ಗೊತ್ತಿಲ್ಲದೆ ಇರುವವರು ಬಾಯಿ ಮುಚ್ಚಿಕೊಂಡು ಇರಿ. ಆರ್ಥರ್ ರಸ್ತೆಯ ಜೈಲಿನಿಂದ ಹೊರಬಂದು ಒಂದು ವರ್ಷ. ಕಾಲ ಬಂದಾಗ ಎಲ್ಲದಕ್ಕೂ ನ್ಯಾಯ ಸಿಗಲಿದೆ. ಶೀಘ್ರವೇ ಸತ್ಯ ಹೊರಬೀಳಲಿದೆ. ಒಳ್ಳೆಯದ್ದನ್ನು ಬಯಸಿದವರಿಗೂ ನನ್ನಿಂದ ಧನ್ಯವಾದಗಳು, ಟ್ರೋಲ್ ಮಾಡಿದವರಿಗೂ ಧನ್ಯವಾದ. ಯಾಕೆಂದರೆ ಅವರಿಂದ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇನ್ನು ರಾಜ್ ಕುಂದ್ರಾ ಜೈಲಿಗೆ ಹೋದಾಗ ಶಿಲ್ಪಾ ಶೆಟ್ಟಿ ಸಾಕಷ್ಟು ಮುಜುಗರಕ್ಕೊಳಗಾಗಿದ್ದರು. ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿದ್ದರು. ಮನಸ್ಸು ನೊಂದಾಗ ಟ್ರೋಲಿಗರಿಗೆ ಖಡಕ್ ವಾರ್ನಿಂಗ್ ಕೂಡ ಮಾಡಿದ್ದರು. ಒಂದಷ್ಟು ದಿನ ಶಿಲ್ಪಾ ಶೆಟ್ಟಿ ಕೂಡ ಸಾರ್ವಜನಿಕ ಜೀವನದಿಂದ ದೂರವೇ ಸರಿದಿದ್ದರು. ಬಳಿಕ ದಿನಕಳೆದಂತೆ ತಮ್ಮ ಸಿನಿಮಾಗ ಕಡೆಗೆ ಗಮನ ಕೊಡಲು ಆರಂಭಿಸಿದರು.

Share This Article
Leave a Comment

Leave a Reply

Your email address will not be published. Required fields are marked *