ಬೆಂಗಳೂರು: ಪೆಟ್ರೋಲ್-ಡಿಸೇಲ್ ಬೆಲೆ ಕಡಿಮೆ ಮಾಡಿದರ ಬಗ್ಗೆ ಮಾತನಾಡಿದ ವ ಶಾಸಕ ಪ್ರಿಯಾಂಕ ಖರ್ಗೆ, ಕೇಂದ್ರ ಸರ್ಕಾರ ಅವರ ಜವಬ್ದಾರಿಯನ್ನು ಮರೆತಿದೆ. ಸೆಸ್ ಮೂಲಕ ಕೋಟಿ ಕೋಟಿ ಟ್ಯಾಕ್ಸ್ ಕಲೆಕ್ಟ್ ಆಗಿದೆ. ಅದನ್ನು ಹಂಚಿಕೆ ಮಾಡಿ. ಅದನ್ನು ಇಟ್ಡುಕೊಂಡು ಏನು ಮಾಡ್ತೀರಾ..? ಹಣಕಾಸು ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನ್ಯಾಯವಾಗಿದೆ. ಕನ್ನಡಿಗರನ್ನು ಸಾಲುಗಾರರಾಗಿ ಈ ಸರ್ಕಾರ ಮಾಡಿಟ್ಟಿದೆ. ಅದರ ಬಗ್ಗೆ ಮಾತನಾಡುವುದನ್ನು ಬಿಟ್ಟು, ಕಾಂಗ್ರೆಸ್ ಸರ್ಕಾರದಲ್ಲಿ ಇಳಿಕೆ ಮಾಡಿಲ್ಲ. ಅದು ಇದು ಎನ್ನುವುದು ತಮ್ಮ ಜವಬ್ದಾರಿಯಿಂದ ಜಾರಿಕೊಳ್ಳುವ ಪ್ರಧಾನಿಯವರ ಉಡಾಫೆ ಮಾತುಗಳು ಇವು.

ಇನ್ನು ಪರೀಕ್ಷೆಗಳ ಹಗರಣದ ಬಗ್ಗೆ ಮಾತನಾಡಿ, ಎಲ್ಲಾ ಮಾಧ್ಯಮದಲ್ಲೂ FDAಗೆ 15 ಲಕ್ಷ,SDAಗೆ 20 ಲಕ್ಷ ಇನ್ನುಳಿದ ಎಲ್ಲಾ ಹುದ್ದೆಗಳಿಗೂ ಇಷ್ಟಿಷ್ಟು ಅಂತ. ಸುಮ್ಮನೆ ಪರೀಕ್ಷೆಯನ್ನು ಯಾಕೆ ಮಾಡುತ್ತೀರಾ. ಬೆಟರ್ ಆಪ್ಶನ್ ಮಾಡಿಬಿಡಿ. ಜನರು ಹೊಲ ಮಾರಿ, ಒಡವೆ ಅಡ ಇಟ್ಟು, ಎಜ್ಯುಕೇಷನ್ ಲೋನ್ ತೆಗೆದುಕೊಳ್ಳುವುದಾದರೂ ತಪ್ಪುತ್ತೆ. ಅವರು ಸಾಲದ ಸುಳಿಗೆ ಸಿಲುಕುವುದು ತಪ್ಪುತ್ತೆ.

40% ಸರ್ಕಾರ ಅಲ್ಲ. 100% ಸರ್ಕಾರವಾಗಿದೆ. ಈ ಸರ್ಕಾರದಲ್ಲಿ ಯುವಕರ ಬದುಕಿನ ಬಗ್ಗೆ ಕಾಳಜಿ ಇಲ್ಲ. ಧರ್ಮದ ಹೆಸರಲ್ಲಿ ಬರೀ ರಾಜಕೀಯ ಮಾಡುತ್ತಾ, ಕಾಲ ಹರಣ ಮಾಡಿ ಚುನಾವಣೆಗೆ ಹೋಗಬೇಕು ಎಂದುಕೊಂಡವರು ಇವರು ಎಂದು ಕಿಡಿಕಾರಿದ್ದಾರೆ.


