ನವದೆಹಲಿ: ಒಂದು ರಾಷ್ಟ್ರ.. ಒಂದು ವಿದ್ಯಾರ್ಥಿ ಐಡಿಯನ್ನು ತರಲು ಕೇಂದ್ರ ಶಿಕ್ಷಣ ಸಚಿವಾಲಯ ತೀರ್ಮಾನ ಮಾಡಿದೆ. ಇದಕ್ಕಾಗಿ ಅಕ್ಟೋಬರ್ 16 ಅಥವಾ 18 ಶಿಕ್ಷಕರು ಹಾಗೂ ಪೋಷಕರ ಸಭೆಯನ್ನು ಕರೆಯಲಾಗುತ್ತದೆ. ಶೀಘ್ರದಲ್ಲಿಯೇ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಯ ಮಕ್ಕಳು ಈ ಐಡಿಯನ್ನು ಪಡೆಯಲಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಈ ಐಡಿ ಬಳಕೆಯಾಗುತ್ತದೆ. ಆಧಾರ್ ಕಾರ್ಡ್ ನಂತೆಯೇ 12 ಅಂಕಿಗಳ ಕಾರ್ಡ್ ಇದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಐಡಿಯನ್ನು ನೀಡಲಾಗುತ್ತದೆ. ಈ ಸಂಬಂಧ ಕೇಂದ್ರ ಶಿಕ್ಷಣ ಇಲಾಖೆ ಪೋಷಕರಿಗೂ ಕೇಳಿದೆ. ಒನ್ ನೇಷನ್ ಒನ್ ಸ್ಟುಡೆಂಟ್ ಯೋಜನೆಯಡಿ, ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ, ಮೂಲಕ ವಿದ್ಯಾರ್ಥಿಯ ಹೊಸ ಗುರುತಿನ ಚೀಟಿ ರಚಿಸಲು ಕೇಳಲಾಗಿದೆ.
ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಹಾಗೂ ಸಾಧನೆಗಳನ್ನು ಟ್ರ್ಯಾಕ್ ಮಾಡುತ್ತದೆ. ಈ ಸಂಬಂಧ ಪೋಷಕರ ಸಭೆ ಕರೆಯಲು ಕೇಂದ್ರ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಹೀಗಾಗಿ ಅಕ್ಟೋಬರ್ 16 ಮತ್ತು 18ರ ನಡುವೆ ಈ ಸಭೆ ನಡೆಯಲಿದೆ. ಈ ಮಾಹಿತಿಯನ್ನು ಕೇಂದ್ರ ಶಿಕ್ಷಣ ಇಲಾಖೆ ಶಿಕ್ಷಣ ಸಂಸ್ಥೆಗಳಿಗೆ ತಿಳಿಸಿದೆ. ಆಧಾರ್ ಕಾರ್ಡ್ ನಂತೆ ವಿದ್ಯಾರ್ಥಿಗಳಿಗೆ ಐಡಿ ನೀಡಲಾಗುತ್ತದೆ.