ಚಿಕ್ಕಬಳ್ಳಾಪುರ: ತರಗಕಾರಿಗಳಲ್ಲಿ ನುಗ್ಗೆ ಕಾಯಿ ಅಂದ್ರೆ ಎಲ್ಲರಿಗೂ ಪ್ರೀತಿದಾಯಕ. ತರಕಾರಿ ತರುವಾಗ ನುಗ್ಗೆಕಾಯಿ ಕಣ್ಣಿಗೆ ಬಿದ್ದರೆ ಬಿಟ್ಟುಬರುವ ಮಾತೇ ಇಲ್ಲ. ಆದ್ರೆ ಈಗ ಅದರ ಬೆಲೆ ಕೇಳಿದ್ರೆ ಕೈಗೆ ತೆಗೆದುಕೊಂಡವರು ವಾಪಾಸ್ ಅಲ್ಲೆ ಇಟ್ಟು ಬರುವ ಸ್ಥಿತಿ ಎದುರಾಗಿದೆ.
ಹೌದು, ದಿನೇ ದಿನೇ ಎಲ್ಲಾ ತರಕಾರಿಗಳ ಬೆಲೆ ಗಗನಕ್ಕೇರುತ್ತಿದೆ. ಈ ಬೆನ್ನಲ್ಲೇ ನುಗ್ಗೆಕಾಯಿ ಬೆಲೆ ಕೂಡ ಕಡಿಮೆ ಏನು ಇಲ್ಲ. ಒಂದು ಕೆಜಿಗೆ ಬರೋಬ್ಬರಿ 400 ರೂಪಾಯಿ ಆಗಿದೆ. ಬೆಲೆ ಕೇಳಿ ಗ್ರಾಹಕ ದಂಗಾಗಿದ್ದಾನೆ. ಆದ್ರೆ ಇಳುವರಿಯ ಅಭಾವ ಬೆಲೆ ಏರಿಕೆಗೆ ಕಾರಣವಾಗಿದೆ.
ಇತ್ತೀಚೆಗೆ ಸುರಿದ ಬಾರಿ ಮಳೆಯಿಂದಾಗಿ ಸಾಕಷ್ಟು ತರಕಾರಿಗಳು ಹಾನಿಯಾಗಿವೆ. ಅದರಲ್ಲಿ ನುಗ್ಗೆಕಾಯಿ ಕೂಡ ಹೊರತಾಗಿಲ್ಲ. ನುಗ್ಗೆಕಾಯಿಯ ಗಿಡಗಳು ಹಾಳಾದ ಹಿನ್ನೆಲೆ ಮಾರುಕಟ್ಟೆಗೆ ನುಗ್ಗೆಕಾಯಿ ಬರ್ತಾ ಇಲ್ಲ. ಆದ್ರೆ ಇದೆ ಸಮಯದಲ್ಲೇ ನುಗ್ಗೆಕಾಯಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಮಹಾರಾಷ್ಟ್ರದಿಂದ ನುಗ್ಗೆಕಾಯಿ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದಾರೆ.